Covid-19 India Update: 43,071 ಹೊಸ ಪ್ರಕರಣಗಳು, 955 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್–19 ದೃಢಪಟ್ಟ 43,071 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 955 ಮಂದಿ ಕೊರೊನಾ ವೈರಸ್ ಸೋಂಕಿನ ಕಾರಣಗಳಿಂದ ಸಾವಿಗೀಡಾಗಿದ್ದಾರೆ. ಕೋವಿಡ್ ಪಾಸಿಟಿವ್ ಪ್ರಮಾಣವು ಸತತ 27ನೇ ದಿನ ಶೇ.5ಕ್ಕಿಂತ ಕಡಿಮೆಯಾಗಿದ್ದು, ಪ್ರಸ್ತುತ ಶೇ.2.34ರಷ್ಟಿದೆ.
97 ದಿನಗಳ ಬಳಿಕ ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 5 ಲಕ್ಷಕ್ಕಿಂತ ಕಡಿಮೆಯಾಗಿದ್ದು, 4.85 ಲಕ್ಷ ತಲುಪಿದೆ. ಒಟ್ಟು ಪ್ರಕರಣಗಳ ಪೈಕಿ ಶೇ.1.59ರಷ್ಟು ಪ್ರಕರಣಗಳು ಸಕ್ರಿಯವಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ.
ಒಟ್ಟು ಪ್ರಕರಣಗಳ ಸಂಖ್ಯೆ 3.05 ಕೋಟಿ ದಾಟಿದ್ದು, ಈವರೆಗೂ 4,02,005 ಮಂದಿ ಸಾವಿಗೀಡಾಗಿದ್ದಾರೆ.
📍#COVID19 India Tracker
(As on 04th July, 2021, 08:00 AM)➡️Confirmed cases: 3,05,45,433
➡️Recovered: 2,96,58,078 (97.09%)👍
➡️Active cases: 4,85,350 (1.59%)
➡️Deaths: 4,02,005 (1.32%)#IndiaFightsCorona#Unite2FightCorona#StaySafe @MoHFW_INDIA pic.twitter.com/2uRXqfxe9d— #IndiaFightsCorona (@COVIDNewsByMIB) July 4, 2021
ಹೊಸ ಪ್ರಕರಣಗಳಿಂತ ಗುಣಮುಖರಾಗುವ ಪ್ರಮಾಣವು ಹೆಚ್ಚಿದೆ. 24 ಗಂಟೆಗಳಲ್ಲಿ 52,299 ಮಂದಿ ಚೇತರಿಕೆ ಕಂಡಿದ್ದು, ಒಟ್ಟು 2.96 ಕೋಟಿಗೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣವು ಶೇ.97.09ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಕೋವಿಡ್ 3ನೇ ಅಲೆಯಲ್ಲಿ 2ನೇ ಅಲೆಯ ಅರ್ಧದಷ್ಟು ಪ್ರಕರಣ ಹರಡುವ ಸಾಧ್ಯತೆ: ವರದಿ
24 ಗಂಟೆಗಳ ಅಂತರದಲ್ಲಿ 63.87 ಲಕ್ಷ ಜನರಿಗೆ ಕೋವಿಡ್–19 ಲಸಿಕೆ ಹಾಕಲಾಗಿದೆ. ದೇಶದಾದ್ಯಂತ ಒಟ್ಟು 35.12 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಜುಲೈ 3ರಂದು 18,38,490 ಗಂಟಲು ದ್ರವ ಮಾದರಿಗಳಿಗೆ ಕೋವಿಡ್–19 ಪರೀಕ್ಷೆ ನಡೆಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.