ಭಾನುವಾರ, ನವೆಂಬರ್ 27, 2022
27 °C

Covid India Update| ಕೋವಿಡ್‌ ಪ್ರಕರಣಗಳಲ್ಲಿ ಭಾರಿ ಇಳಿಕೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,230 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಒಂದು ದಿನದ ಈ ಅವಧಿಯಲ್ಲಿ 32 ಸಾವುಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಇದರೊಂದಿಗೆ, ದೇಶದಲ್ಲಿ ಈವರೆಗೆ ಕೋವಿಡ್‌ ಮಹಾಮಾರಿಗೆ 5,28,562 ಮಂದಿ ಪ್ರಾಣ ತೆತ್ತಂತಾಗಿದೆ.  

ಸೋಮವಾರ 4,129 ಪ್ರಕರಣಗಳು ಪತ್ತೆಯಾಗಿದ್ದವು. 20 ಮಂದಿ ಮೃತಪಟ್ಟಿದ್ದಾರೆ. 

ಕಳೆದ 24 ಗಂಟೆಗಳಲ್ಲಿ 4,255 ರೋಗಿಗಳು ಚೇತರಿಸಿಕೊಂಡಿದ್ದಾರೆ. ಹೀಗಾಗಿ ದೇಶದ ಸಕ್ರಿಯ ಪ್ರಕರಣ ಸಂಖ್ಯೆ ಸದ್ಯ 42,358 ರಷ್ಟು ಇದೆ. ಭಾರತದ ದೈನಂದಿನ ಪಾಸಿವಿಟಿ ದರವು ಶೇಕಡಾ 1.18 ರಷ್ಟಿದೆ.  

24 ಗಂಟೆಗಳಲ್ಲಿ ದೇಶದಾದ್ಯಂತ ಒಟ್ಟು 2,74,755 ಕೋವಿಡ್‌ ಪತ್ತೆ ಪರೀಕ್ಷೆಗಳನ್ನು ಮಾಡಲಾಗಿದೆ. ಇದರೊಂದಿಗೆ ದೇಶದಲ್ಲಿ ಈ ವರೆಗೆ ಒಟ್ಟಾರೆ 89.41 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. 

ಮಂಗಳವಾರ ಬೆಳಗಿನ ಹೊತ್ತಿಗೆ, ಭಾರತದಲ್ಲಿ 217.82 ಕೋಟಿಗೂ ಮೀರಿ ಕೋವಿಡ್-19 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. 

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು