Covid-19 India Update: ದೇಶದಲ್ಲಿ 4.59 ಲಕ್ಷ ಸಕ್ರಿಯ ಪ್ರಕರಣಗಳು

ನವದೆಹಲಿ: ಭಾರತದಲ್ಲಿ ಬುಧವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್–19 ದೃಢಪಟ್ಟ 43,733 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಕೊರೊನಾ ವೈರಸ್ ಸೋಂಕು ಕಾರಣಗಳಿಂದಾಗಿ 930 ಮಂದಿ ಸಾವಿಗೀಡಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಅಪ್‌ಡೇಟ್‌ನಿಂದ ತಿಳಿದು ಬಂದಿದೆ.
ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,59,920ಕ್ಕೆ ಇಳಿಕೆಯಾಗಿದೆ. ಒಟ್ಟು 3,06,63,665 ಪ್ರಕರಣಗಳ ಪೈಕಿ ಶೇ.1.52ರಷ್ಟು ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ ಶೇ 97.18ರಷ್ಟಾಗಿದ್ದು, ಈವರೆಗೆ 2,97,99,534 ಮಂದಿ ಗುಣಮುಖರಾಗಿದ್ದಾರೆ.
ಒಟ್ಟು 4,04,211 ಮಂದಿ ಮೃತಪಟ್ಟಿದ್ದಾರೆ.
ದೇಶದಾದ್ಯಂತ ಒಟ್ಟು 36,13,23,548 ಡೋಸ್‌ಗಳಷ್ಟು ಲಸಿಕೆ ಹಾಕಲಾಗಿದೆ. ಐಸಿಎಂಆರ್ ಪ್ರಕಾರ, ಈವರೆಗೂ 42,33,32,097 ಗಂಟಲು ದ್ರವ ಮಾದರಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.