ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ಒಂದೇ ದಿನ 3,49,691 ಹೊಸ ಪ್ರಕರಣ, 2,767 ಜನರು ಸಾವು

Last Updated 25 ಏಪ್ರಿಲ್ 2021, 4:52 IST
ಅಕ್ಷರ ಗಾತ್ರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,49,691 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 2,767 ಸೋಂಕಿತರು ಮೃತಪಟ್ಟಿದ್ದಾರೆ ಮತ್ತು 2,17,113 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಈವರೆಗೆ ಒಟ್ಟು 1,69,60,172 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,92,311 ಮಂದಿ ಸಾವಿಗೀಡಾಗಿದ್ದಾರೆ.

ಈವರೆಗೂ ಒಟ್ಟು 1,40,85,110 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 26,82,751 ಸಕ್ರಿಯ ಪ್ರಕರಣಗಳಿವೆ. ಈವರೆಗೆ 14.09 (14,09,16,417) ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಏ. 24ರ ಹೊತ್ತಿಗೆ ದೇಶದಲ್ಲಿ 27,79,18,810 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಶನಿವಾರ ಒಂದೇ ದಿನ 17,19,588 ಮಾದರಿಗಳು ಪರೀಕ್ಷೆಗೆ ಒಳಪಟ್ಟಿವೆ ಎಂದು ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ.

ಸೋಂಕು ಪ್ರಕರಣಗಳ ಪೈಕಿ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಒಟ್ಟಾರೆ 42,28,836 ಜನರಿಗೆ ಸೋಂಕು ತಗುಲಿದ್ದು, 6,96,298 ಸಕ್ರಿಯ ಪ್ರಕರಣಗಳಿವೆ. ಈವರೆಗೆ 34,68,610 ಜನರು ಸೋಂಕಿನಿಂದ ಗುಣಮುಖರಾಗಿದ್ದು, 63,928 ಜನರು ಸಾವಿಗೀಡಾಗಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಕೇರಳದಲ್ಲಿ ಒಟ್ಟಾರೆ 13,77,186 ಜನರಿಗೆ ಸೋಂಕು ತಗುಲಿದೆ. 1,98,904 ಸಕ್ರಿಯ ಪ್ರಕರಣಗಳೊಂದಿಗೆ 11,73,202 ಜನರು ಗುಣಮುಖರಾಗಿದ್ದು, 5,080 ಜನರು ಸಾವಿಗೀಡಾಗಿದ್ದಾರೆ.

13,04,397 ಒಟ್ಟು ಪ್ರಕರಣಗಳೊಂದಿಗೆ ಕರ್ನಾಟಕವು 2,34,502 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಈವರೆಗೂ 10,55,612 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 14,283 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT