ಬುಧವಾರ, ಜೂನ್ 29, 2022
25 °C

ಮಧ್ಯಮ ಕ್ರಮಾಂಕದ ಕ್ಷಿಪಣಿ ಪ್ರಯೋಗ ಯಶಸ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಲಾಸೋರ್ (ಪಿಟಿಐ): ಭಾರತ ತನ್ನ ಮಧ್ಯಮ ಶ್ರೇಣಿಯ ವಾಯುಮಾರ್ಗದಲ್ಲಿ ಗುರಿಯಾಗಿಸಿ ಭೂಮಿಯಿಂದ ಪ್ರಯೋಗಿಸಬಹುದಾದ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ಚಾಂದಿಪುರ್‌ನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಸಿತು.

ದೂರಗಾಮಿ ಗುರಿಯನ್ನು ಅಂದಾಜಿಸಿ ಅತಿವೇಗವಾಗಿ ಮುನ್ನುಗ್ಗುವ ಈ ಕ್ಷಿಪಣಿಯ ಪ್ರಯೋಗ ಬೆಳಿಗ್ಗೆ 10.30ಕ್ಕೆ ನಡೆಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಹೇಳಿಕೆಯಲ್ಲಿ ತಿಳಿಸಿದೆ.

ದೀರ್ಘ ಅಂತರದ ವಾಯುನೆಲೆಯನ್ನು ಗುರಿಯಾಗಿಸಿ ಅಧಿಕ ವೇಗದ ಕ್ಷಿಪಣಿ ಪ್ರಯೋಗಿಸಲಾಯಿತು. ನೇರದಾಳಿಯಲ್ಲಿ ಕ್ಷಿಪಣಿಯು ಗುರಿಯನ್ನು ಧ್ವಂಸಗೊಳಿಸಿತು ಎಂದು ವಿವರಿಸಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು