ಮಂಗಳವಾರ, ನವೆಂಬರ್ 30, 2021
23 °C

ಭಾರತ–ಬ್ರಿಟನ್‌ ವಿದೇಶಾಂಗ ಅಧಿಕಾರಿಗಳ ಭೇಟಿ, ಬಹುಪಕ್ಷೀಯ ವಿಚಾರಗಳ ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವಸಂಸ್ಥೆಯ ಸುಧಾರಣಾ ಕ್ರಮಗಳು, ಭಯೋತ್ಪಾದನೆ ನಿಗ್ರಹ, ಶಾಂತಿಪಾಲನಾ ಪಡೆ ಮತ್ತು ಹವಾಮಾನ ಬದಲಾವಣೆ ಕುರಿತು ಭಾರತ ಮತ್ತು ಬ್ರಿಟನ್‌ ವಿದೇಶಾಂಗ ಸಚಿವರು ಲಂಡನ್‌ನಲ್ಲಿ ಚರ್ಚೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.

ಭಾರತ – ಬ್ರಿಟನ್ ರಾಷ್ಟ್ರಗಳ ನಡುವೆ ಸೋಮವಾರ ನಡೆದ ಎರಡನೇ ಬಹುಪಕ್ಷೀಯ ಸಂವಾದದ ಅಡಿಯಲ್ಲಿ ಉಭಯ ರಾಷ್ಟ್ರಗಳ ಅಧಿಕಾರಿಗಳು ಈ ವಿಷಯಗಳ ಕುರಿತು ಚರ್ಚೆ ನಡೆಸಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ್ ಗುಪ್ತಾ ಭಾರತದ ನಿಯೋಗದ ನೇತೃತ್ವವಹಿಸಿದ್ದರು. ಬ್ರಿಟನ್‌ ಪರವಾಗಿ ವಿಶ್ವಸಂಸ್ಥೆಯಲ್ಲಿರುವ ಬ್ರಿಟನ್‌ ವಿದೇಶಾಂಗ, ಕಾಮನ್‌ವೆಲ್ತ್‌ ಮತ್ತು ಅಭಿವೃದ್ಧಿ ಕಚೇರಿ(ಎಫ್‌ಸಿಡಿಒ)ಯ ರಾಜಕೀಯ ಉಪ ನಿರ್ದೇಶಕ ಹ್ಯಾರಿಯೇಟ್‌ ಮ್ಯಾಥ್ಯೂ ಹಾಜರಿದ್ದರು.

ಉಭಯ ರಾಷ್ಟ್ರಗಳ ಅಧಿಕಾರಿಗಳು ಕಾಮನ್‌ವೆಲ್ತ್ ಯೋಜನೆಯ ಕಾರ್ಯತಂತ್ರ ಮತ್ತು ಆದ್ಯತೆಗಳ ಕುರಿತು ಅಭಿಪ್ರಾಯಗಳನ್ನು ವಿನಿಯಮ ಮಾಡಿಕೊಂಡರು.

ಇದೇ ವೇಳೆ ಕಳೆದ ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಭಾರತವನ್ನು ಬ್ರಿಟನ್ ಅಧಿಕಾರಿ ಅಭಿನಂದಿಸಿದರು.

ಭಾರತೀಯ ನಿಯೋಗದ ನೇತೃತ್ವವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ್ ಗುಪ್ತಾ ನೇತೃತ್ವ ವಹಿಸಿದ್ದರು, ಯುಕೆ ಪರ ಯುಎನ್, ಯುಕೆ ವಿದೇಶಿ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಉಪ ರಾಜಕೀಯ ನಿರ್ದೇಶಕ ಹ್ಯಾರಿಯೆಟ್ ಮ್ಯಾಥ್ಯೂಸ್ ನೇತೃತ್ವ ವಹಿಸಿದ್ದರು.

ಎರಡೂ ರಾಷ್ಟ್ರಗಳ ನಿಯೋಗಗಳು, ಬಹುಪಕ್ಷೀಯ ವಿಷಯಗಳಲ್ಲಿ ತಮ್ಮ ಸಹಕಾರವನ್ನು ಮತ್ತಷ್ಟು ಬಲವರ್ಧನೆ ಗೊಳಿಸಲು ನಿಕಟವಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿವೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು