ಶನಿವಾರ, ಜನವರಿ 23, 2021
23 °C

ಭಾರತ, ಬ್ರಿಟನ್‌ ನಡುವೆ ‌ಜ.6ರಿಂದ ವಿಮಾನ ಸಂಚಾರ ಸೇವೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತದಿಂದ ಬ್ರಿಟನ್‌ಗೆ ಇದೇ 6ರಿಂದ ವಿಮಾನಯಾನ ಸೇವೆ ಪುನರಾರಂಭವಾಗಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್ ಪುರಿ ಶನಿವಾರ ಹೇಳಿದರು. ಆ ದೇಶದಿಂದ ವಿಮಾನಯಾನ ಸೇವೆಯು ಜನವರಿ 8ರ ನಂತರ ಪುನರಾರಂಭವಾಗಲಿದೆ ಎಂದು ತಿಳಿಸಿದರು.

ಭಾರತ ಮತ್ತು ಬ್ರಿಟನ್‌ನಿಂದ ತಲಾ 15 ವಿಮಾನಗಳು ಸಂಚಾರ ಸೇವೆ ಆರಂಭಿಸಲಿವೆ. ಈ ವ್ಯವಸ್ಥೆ ಜನವರಿ 23ರವರೆಗೂ ಚಾಲ್ತಿಯಲ್ಲಿ ಇರಲಿದ್ದು, ನಂತರ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ರೂಪಾಂತರಗೊಂಡ ಕೊರೊನಾ ವೈರಸ್‌ ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಹಿಂದೆಯೇ ಉಭಯ ದೇಶಗಳ ನಡುವಣ ವಿಮಾನಯಾನ ಸೇವೆಯನ್ನು ಭಾರತ ನಿರ್ಬಂಧಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು