ಗುರುವಾರ , ಏಪ್ರಿಲ್ 15, 2021
24 °C

ಗೋಲ್ಡನ್‌ ಚಾರಿಯಟ್‌ 14ರಿಂದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಐಷಾರಾಮಿ ರೈಲು ‘ಗೋಲ್ಡನ್‌ ಚಾರಿಯಟ್‌’ ಅನ್ನು ಪುನರಾರಂಭಿಸಲು ಭಾರತೀಯ ರೈಲ್ವೆಯ ಐಆರ್‌ಸಿಟಿಸಿ ವಿಭಾಗವು ನಿರ್ಧರಿಸಿದೆ. ಈ ಋತುವಿನ ಮೊದಲ ಪಯಣ ಇದೇ 14ರಂದು (ಭಾನುವಾರ) ಆರಂಭವಾಗಲಿದೆ. 

ಆರು ರಾತ್ರಿ ಮತ್ತು ಏಳು ದಿನಗಳ ಈ ಪಯಣವು ಬೆಂಗಳೂರಿನಿಂದ ಆರಂಭವಾಗಲಿದೆ. ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಐಹೊಳೆ, ಪ‍ಟ್ಟದಕಲ್‌ ಮತ್ತು ಗೋವಾ ಸಂದರ್ಶನದ ಬಳಿಕ ಬೆಂಗಳೂರಿಗೆ ಮರಳಲಿದೆ. ಮೂರು ರಾತ್ರಿ ಮತ್ತು ನಾಲ್ಕು ದಿನಗಳ ಪ್ರವಾಸದ ಇನ್ನೊಂದು ರೈಲು ಇದೇ 21ರಂದು ಬೆಂಗಳೂರಿನಿಂದ ಹೊರಡಲಿದೆ. ಮೈಸೂರು, ಹಂಪಿ ಮತ್ತು ಮಹಾಬಲಿಪುರಂ ಸಂದರ್ಶಿಸುವ ರೈಲು ಬಳಿಕ ಬೆಂಗಳೂರಿಗೆ ಮರಳಲಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. 

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಾಲೀಕತ್ವದ ಈ ರೈಲು ಸೇವೆ 2008ರಲ್ಲಿ ಆರಂಭವಾಗಿತ್ತು. 2020ರಲ್ಲಿ ಇದರ ನಿರ್ವಹಣೆಯನ್ನು ಐಆರ್‌ಸಿಟಿಸಿಗೆ ವಹಿಸಲಾಗಿದೆ.

ರೈಲಿನ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ವೈಫೈ, ಒಟಿಟಿ ಸೌಲಭ್ಯ ಅಳವಡಿಸಲಾಗಿದೆ. ಅಂತರರಾಷ್ಟ್ರೀಯ ಮತ್ತು ದೇಶೀಯ ಆಹಾರದ ಆಯ್ಕೆಯೂ ಇದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು