ಮಂಗಳವಾರ, ಏಪ್ರಿಲ್ 20, 2021
31 °C

Covid-19 India Update: ಮತ್ತೆ ಲಕ್ಷ ದಾಟಿದ ಕೋವಿಡ್ ಪ್ರಕರಣ, 630 ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

Retail traders stage a protest against Covid-19 restrictions imposed till April 30 by the Maharashtra Government, at a market in Nagpur, Tuesday, April 6, 2021. Credit: PTI Photo

ನವದೆಹಲಿ: ದೇಶದಲ್ಲಿ ದಿನವೊಂದರ ಗರಿಷ್ಠ ಕೋವಿಡ್ ಪ್ರಕರಣಗಳು ಬುಧವಾರ ಬೆಳಿಗ್ಗೆ ವರದಿಯಾಗಿವೆ. 24 ಗಂಟೆ ಅವಧಿಯಲ್ಲಿ 1,15,736 ಹೊಸ ಪ್ರಕರಣಗಳು ದೃಢಪಟ್ಟಿದ್ದು, 630 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಕಳೆದ ಮೂರು ದಿನಗಳಲ್ಲಿ ಇದು ಎರಡನೇ ಬಾರಿ ಆಗಿದೆ. ಸೋಮವಾರವೂ ಒಂದು ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದವು.

ಓದಿ: 

ಇದರೊಂದಿಗೆ ದೇಶದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 1.28 ಕೋಟಿ ದಾಟಿದ್ದು, ಸಾವಿನ ಸಂಖ್ಯೆ 1,66,177ಕ್ಕೆ ಏರಿಕೆಯಾಗಿದೆ.

ಕಳೆದ 28 ದಿನಗಳಲ್ಲಿ ನಿರಂತರ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸದ್ಯ 8,43,473 ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಪ್ರಕರಣಗಳ ಶೇ 6.59ರಷ್ಟಾಗಿದೆ. ಚೇತರಿಕೆ ಪ್ರಮಾಣ ಶೇ 92.11ಕ್ಕೆ ಇಳಿಕೆಯಾಗಿದೆ.

ಓದಿ: ಆಯುರ್ವೇದದಲ್ಲಿ ಬಳಸುವ ಗಿಡಮೂಲಿಕೆಯಲ್ಲಿ ಕೋವಿಡ್‌ಗೆ ಔಷಧ: ಸಂಶೋಧನೆ

ಫೆಬ್ರುವರಿ 12ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ ಅತಿ ಕಡಿಮೆ, ಅಂದರೆ 1,35,926 ಆಗಿತ್ತು.

ಈವರೆಗೆ 1.17 ಕೋಟಿಗೂ ಹೆಚ್ಚು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು