ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಸೇವೆ ವ್ಯತ್ಯಯದ ಸೈಬರ್ ದಾಳಿ ಹಿಂದೆ ಅಮೆರಿಕ, ಇಸ್ರೇಲ್‌ ಕೈವಾಡ: ಇರಾನ್ ಶಂಕೆ

Last Updated 31 ಅಕ್ಟೋಬರ್ 2021, 12:02 IST
ಅಕ್ಷರ ಗಾತ್ರ

ಟೆಹರಾನ್: ಇಂಧನ ಪೂರೈಕೆ ಸೇವೆ ತೀವ್ರಸ್ವರೂಪದಲ್ಲಿ ವ್ಯತ್ಯಯವಾಗಲು ಕಾರಣವಾವಾಗಿದ್ದ ಸೈಬರ್ ದಾಳಿಯ ಹಿಂದೆ ಇಸ್ರೇಲ್‌ ಮತ್ತು ಅಮೆರಿಕದ ಕೈವಾಡ ಇರುವ ಶಂಕೆಯಿದೆ ಎಂದು ಇರಾನ್‌ನ ಜನರಲ್‌ಘೋಲಂರೆಜಾ ಜಲಾಲಿ ಹೇಳಿದ್ದಾರೆ.

ಮಂಗಳವಾರ ನಡೆದಿದ್ದ ಸೈಬರ್‌ ದಾಳಿಯ ತಂತ್ರಜ್ಞಾನದ ಹಿನ್ನೆಲೆ ಮತ್ತು ಈ ಹಿಂದೆ ನಡೆದಿದ್ದ ದಾಳಿಗೂ ಸಾಮ್ಯತೆ ಇದೆ. ಇದು, ನಮ್ಮ ವೈರಿಗಳಾದ ಅಮೆರಿಕ ಮತ್ತು ಇಸ್ರೇಲ್‌ನ ಉದ್ದೇಶಪೂರ್ವಕ ಕೃತ್ಯ ಎಂದು ಅವರು ಹೇಳಿದ್ದಾರೆ.

ನಾವು ಶಾಹಿದ್‌ ರಾಜೈ ಪೋರ್ಟ್‌ ಅಪಘಾತ ಮತ್ತು ರೈಲ್ವೆ ಅಪಘಾತ ಈ ಎರಡೂ ಘಟನೆಗಳನ್ನು ಅಧ್ಯಯನ ಮಾಡಿದ್ದೇವೆ. ಪರಸ್ಪರ ಹೋಲಿಕೆ ಇದೆ ಎಂದು ನಾಗರಿಕ ರಕ್ಷಣಾ ಘಟಕದ ಮುಖ್ಯಸ್ಥರೂ ಆದ ಜಲಾಲಿ ಅವರು ಹೇಳಿದರು.

ಜುಲೈ ತಿಂಗಳಲ್ಲಿ ಇರಾನ್‌ನ ಸಾರಿಗೆ ಸಚಿವಾಲಯವು ಸೈಬರ್ ದಾಳಿಯ ಪರಿಣಾಮ ಕಂಪ್ಯೂಟರ್‌ ವ್ಯವಸ್ಥೆ, ವೆಬ್‌ಸೈಟ್‌ ಕಾರ್ಯನಿರ್ವಹಣೆಗೆ ಧಕ್ಕೆಯಾಗಿತ್ತು ಎಂದು ಫಾರ್ಸ್ ನ್ಯೂಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT