ನಿಮ್ಮ ನಾದಿನಿ ಡ್ರಗ್ಸ್ ಜಾಲದಲ್ಲಿದ್ದಾರೆಯೇ?: ಸಮೀರ್ ವಾಂಖೆಡೆಗೆ ಸಚಿವ ಪ್ರಶ್ನೆ

ಮುಂಬೈ: ಡ್ರಗ್ಸ್ ವಹಿವಾಟಿನಲ್ಲಿ ನಿಮ್ಮ ನಾದಿನಿಯೂ ಭಾಗಿಯಾಗಿದ್ದಾರೆಯೇ ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್ ಅವರು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಪ್ರಶ್ನಿಸಿದ್ದಾರೆ.
‘ಸಮೀರ್ ದಾವೂದ್ ವಾಂಖೆಡೆ ನಿಮ್ಮ ನಾದಿನಿ ಹರ್ಷದಾ ದಿನಾನಾಥ್ ರೆಡ್ಕರ್ ಅವರು ಡ್ರಗ್ಸ್ ವಹಿವಾಟಿನಲ್ಲಿ ತೊಡಗಿದ್ದಾರೆಯೇ. ಅವರ ವಿರುದ್ಧ ಪ್ರಕರಣ ಪುಣೆ ನ್ಯಾಯಾಲಯದಲ್ಲಿ ಬಾಕಿ ಇದೆಯೇ ಎಂದು ನೀವು ಉತ್ತರಿಸಬೇಕು. ಇಲ್ಲಿದೆ ಪುರಾವೆ’ ಎಂದು ಸಚಿವರು ಟ್ವೀಟ್ ಮಾಡಿದ್ದು, ಪೂರಕವಾಗಿ ದಾಖಲೆಯೊಂದನ್ನು ಹಂಚಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಎನ್‌ಸಿಬಿ ಅಧಿಕಾರಿಯೊಬ್ಬರು, ವಾಂಖೆಡೆ ಅವರು ಸೆಪ್ಟೆಂಬರ್ 2008ರಲ್ಲಿ ಸೇವೆಗೆ ಸೇರಿದ್ದಾರೆ. ಅವರ ನಾದಿನಿಗೆ ಸೇರಿದ್ದು ಎನ್ನಲಾದ ಪ್ರಕರಣ ಜನವರಿ 2008ರಲ್ಲಿ ದಾಖಲಾಗಿದೆ. ವಾಂಖೆಡೆ ಅವರು ಹರ್ಷದಾ ಅವರ ಸಹೋದರಿ ಕ್ರಾಂತಿ ಅವರನ್ನು 2017ರಲ್ಲಿ ಮದುವೆಯಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.