ಶುಕ್ರವಾರ, ಮಾರ್ಚ್ 31, 2023
22 °C
ಅವಳಿ ಮಕ್ಕಳಿಗೆ ಅಜ್ಜನಾದ ಮುಕೇಶ್‌ ಅಂಬಾನಿ

ಇಶಾ ಅಂಬಾನಿ- ಆನಂದ್‌ ಪಿರಾಮಲ್‌ ದಂಪತಿಗೆ ಅವಳಿ ಮಕ್ಕಳು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ ಅಜ್ಜನಾದ ಸಂಭ್ರಮದಲ್ಲಿದ್ದಾರೆ. ಮುಕೇಶ್‌ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್‌ ಪಿರಾಮಲ್‌ ದಂಪತಿಗೆ ಅವಳಿ ಮಕ್ಕಳು ಜನಿಸಿದ್ದಾರೆ.

‘ನಮ್ಮ ಮಕ್ಕಳಾದ ಇಶಾ–ಆನಂದ್‌ ದಂಪತಿಗೆ ನವೆಂಬರ್‌ 19ರಂದು ಭಗವಂತ ಅವಳಿ ಮಕ್ಕಳು ಕರುಣಿಸಿದ್ದಾನೆ ಎಂದು ತಿಳಿಸಲು ಸಂತಸವಾಗುತ್ತಿದೆ’ ಎಂದು ಅಂಬಾನಿ ಕುಟುಂಬದ ಪತ್ರಿಕಾ ಪ್ರಕಟಣೆ ಹೇಳಿದೆ.

ಇಶಾ ಅಂಬಾನಿ ಹೆಣ್ಣು ಮತ್ತು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ‘ಮೊಮ್ಮಗಳು ಆದಿಯ ಮತ್ತು ಮೊಮ್ಮಗ ಕೃಷ್ಣ ಆರೋಗ್ಯಯುತವಾಗಿದ್ದಾರೆ. ಇಶಾ ಮತ್ತು ಆನಂದ್ ಅವರ ಜೀವನದ ಈ ಪ್ರಮುಖ ಹಂತದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇವೆ’ ಎಂದು ಅಂಬಾನಿ ಕುಟುಂಬ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಮುಕೇಶ್‌ ಪುತ್ರಿ ಇಶಾ, ಪಿರಾಮಲ್‌ ಸಮೂಹದ ಅಜಯ್‌ ಮತ್ತು ಸ್ವಾತಿ ಅವರ ಪುತ್ರ ಆನಂದ್‌ ಅವರನ್ನು 2018ರಲ್ಲಿ ವಿವಾಹವಾಗಿದ್ದರು. ಈ ಜೋಡಿ ಬಾಲ್ಯದ ಸ್ನೇಹಿತರಾಗಿದ್ದು ಉಭಯ ಕುಟುಂಬದವರು ಮೊದಲಿನಿಂದಲೂ ಚಿರಪರಿಚಿತರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು