ವಿದೇಶಿ ಉಪಗ್ರಹ ಉಡಾವಣೆ ಮೂಲಕ ಇಸ್ರೋ ₹2,229 ಕೋಟಿ ಗಳಿಕೆ!

ನವದೆಹಲಿ (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಾಗತಿಕ ಗ್ರಾಹಕರ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ₹2,229 ಕೋಟಿ (279 ಮಿಲಿಯನ್ ಡಾಲರ್) ಗಳಿಸಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ.
ಈ ಕುರಿತ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ‘ಇಸ್ರೋ ತನ್ನ ವಾಣಿಜ್ಯ ಉದ್ದೇಶದ ಅಂಗ ಸಂಸ್ಥೆಯ ಸಹಭಾಗಿತ್ವದಲ್ಲಿ ಪಿಎಸ್‌ಎಲ್‌ವಿ ನೌಕೆಯ ಮೂಲದ 34 ದೇಶಗಳ 345 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಮೂಲಕ ಒಟ್ಟಾರೆಯಾಗಿ 279 ಮಿಲಿಯನ್ ಡಾಲರ್ ಹಣವನ್ನು ಗಳಿಸಿದೆ ಎಂದು ತಿಳಿಸಿದ್ದಾರೆ.
ಇಸ್ರೋ, ಇತ್ತೀಚೆಗೆ ಅಂದರೆ ಜೂನ್ 30ರಂದು ಪಿಎಸ್‌ಎಲ್‌ವಿ–ಸಿ53 ಬಾಹ್ಯಾಕಾಶ ನೌಕೆಯ ಮೂಲಕ ಸಿಂಗಪುರದ ಮೂರು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿದೆ.
ESZ: ಇಎಸ್ಝೆಡ್ನಿಂದ ವಸತಿ, ಕೃಷಿ ಭೂಮಿ ಹೊರಗಿಡಲು ಕೇರಳ ನಿರ್ಧಾರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.