ಗುರುವಾರ , ಅಕ್ಟೋಬರ್ 1, 2020
28 °C

ಇಸ್ರೊ ಮಾಜಿ ವಿಜ್ಞಾನಿಗೆ ₹1.3 ಕೋಟಿ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೇರಳ ಸರ್ಕಾರವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರಿಗೆ ₹1.3 ಕೋಟಿ ಪರಿಹಾರ ನೀಡಿದೆ. 

ಗೂಢಚಾರಿಕೆ ಪ್ರಕರಣವೊಂದರಲ್ಲಿ ನಂಬಿ ನಾರಾಯಣನ್‌ ಅವರ ಹೆಸರನ್ನು ಪೊಲೀಸರು ತಳಕು ಹಾಕಿದ್ದರು. ವಿಚಾರಣೆ ನಂತರ ಇದು ಸುಳ್ಳು ಆರೋಪ ಎಂದು ಸಾಬೀತಾಗಿತ್ತು. ಸ್ಥಳೀಯ ನ್ಯಾಯಾಲಯವು ನಾರಾಯಣನ್‌ ಅವರಿಗೆ ಪರಿಹಾರ ನೀಡಲು ಆದೇಶಿಸಿತ್ತು ಹಾಗೂ ಮೊತ್ತವನ್ನು ₹1.3 ಕೋಟಿ ಎಂದು ನಿಗದಿಪಡಿಸಲಾಗಿತ್ತು. 

ಸುಪ್ರೀಂ ಕೋರ್ಟ್‌ ಆದೇಶದಂತೆ ಈ ಹಿಂದೆ ಅವರಿಗೆ ₹50 ಲಕ್ಷ ಪರಿಹಾರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸಿನಂತೆ ₹ 10 ಲಕ್ಷ ಪರಿಹಾರ ನೀಡಲಾಗಿತ್ತು. 

ಪ್ರಕರಣವೇನು?: 1994ರಲ್ಲಿ ಇಸ್ರೊದ ಕೆಲ ದಾಖಲೆಗಳನ್ನು ಕೆಲ ವಿಜ್ಞಾನಿಗಳು ಇಬ್ಬರು ಮಾಲ್ಡೀವ್ಸ್‌ ಮೂಲದ ಮಹಿಳೆಯರಿಗೆ ಸೋರಿಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.