ಸೋಮವಾರ, ಏಪ್ರಿಲ್ 19, 2021
23 °C

ಪ್ರಧಾನಿಗೆ ಲಸಿಕೆ ಹಾಕಿದ್ದು, ಸ್ಮರಣೀಯ ಕ್ಷಣವಾಗಿದೆ: ಸಂತಸ ಹಂಚಿಕೊಂಡ ನರ್ಸ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೆಹಲಿಯ ಏಮ್ಸ್‌ನಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಅರ್ಹರಾಗಿರುವವರೆಲ್ಲ ಕೂಡಲೇ ಲಸಿಕೆ ಹಾಕಿಸಿಕೊಳ್ಳಿ ಎಂದು ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ಪುದುಚೇರಿ ಮೂಲದ ನರ್ಸ್ ಪಿ. ನಿವೇದಾ ಮತ್ತು ಪಂಜಾಬ್‌ ಮೂಲದ ನಿಶಾ ಶರ್ಮಾ ಮೋದಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಿದ್ದಾರೆ.

‘ನಾನು, ಇಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋವಾಕ್ಸಿನ್ ಲಸಿಕೆಯ ಎರಡನೇ ಡೋಸ್ ನೀಡಿದ್ದೇನೆ. ಅವರು ನಮ್ಮೊಂದಿಗೆ ಮಾತನಾಡಿದರು. ನಾನು ಅವರನ್ನು ಭೇಟಿಯಾಗಿ ಲಸಿಕೆ ಹಾಕಿದ್ದು, ಒಂದು ಸ್ಮರಣೀಯ ಕ್ಷಣವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಲಸಿಕೆ ನೀಡಿದ ಇಬ್ಬರು ನರ್ಸ್‌ಗಳ ಪೈಕಿ ಒಬ್ಬರಾದ ನಿಶಾ ಶರ್ಮಾ ಹೇಳಿದ್ದಾರೆ.

ಇದನ್ನೂ ಒದಿ.. ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಪಡೆದ ಪ್ರಧಾನಿ ನರೇಂದ್ರ ಮೋದಿ

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋವಾಕ್ಸಿನ್ ಮೊದಲ ಡೋಸ್ ನೀಡಿದ ವ್ಯಾಕ್ಸಿನೇಟರ್ ನಾನು. ಇಂದು ನಾನು ಅವರನ್ನು ಭೇಟಿಯಾಗಲು ಮತ್ತು ಅವರಿಗೆ ಎರಡನೇ ಬಾರಿಗೆ ಲಸಿಕೆ ಹಾಕಲು ಮತ್ತೊಂದು ಅವಕಾಶ ಸಿಕ್ಕಿತು. ಇದರಿಂದ ನನಗೆ ಮತ್ತಷ್ಟು ಸಂತಸವಾಗಿದೆ. ಪ್ರಧಾನಿ ಮೋದಿಯವರು ನಮ್ಮೊಂದಿಗೆ ಮಾತನಾಡಿದರು, ನಾವು ಅವರೊಂದಿಗೆ ಫೋಟೊಗಳನ್ನು ತೆಗೆಸಿಕೊಂಡಿದ್ದೇವೆ’ ಎಂದು ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮತ್ತೊಬ್ಬ ನರ್ಸ್ ಪಿ ನಿವೇದಾ ಸಂತಸ ವ್ಯಕ್ತಪಡಿಸಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು