ಸೋಮವಾರ, ಆಗಸ್ಟ್ 8, 2022
21 °C
ಸೀತಾಪುರ ಜೈಲಿನಲ್ಲಿರುವ ಹದಿಮೂರು ಮಂದಿ ಕೈದಿಗಳಿಗೂ ಕೋವಿಡ್ ದೃಢ

ಸಮಾಜವಾದಿ ಪಕ್ಷದ ಮುಖಂಡ ಅಜಮ್‌ಖಾನ್‌ಗೆ ಕೋವಿಡ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೀತಾಪುರ (ಉತ್ತರ ಪ್ರದೇಶ): ಸೀತಾಪುರ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮೊಹಮ್ಮದ್‌ ಅಜಮ್‌ ಖಾನ್‌ ಅವರಿಗೆ ಕೋವಿಡ್‌–19 ದೃಢಪಟ್ಟಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ರಾಮಪುರ ಸಂಸದರಾಗಿರುವ ಅಜಮ್‌ಖಾನ್‌ ಮತ್ತು ಜೈಲಿನಲ್ಲಿರುವ ಇತರ 13 ಜನ ಕೈದಿಗಳಿಗೆ ಕೋವಿಡ್ ತಗುಲಿರುವುದು ರ‍್ಯಾಪಿಡ್‌ ಆ್ಯಂಟಿಜನ್ ಮತ್ತು ಆರ್‌ಟಿಪಿಸಿಆರ್‌ ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದು ಜೈಲು ಅಧಿಕಾರಿ ಆರ್‌.ಎಸ್‌.ಯಾದವ್‌ ತಿಳಿಸಿದ್ದಾರೆ.

ಭೂಕಬಳಿಕೆ, ಭೂ ಒತ್ತುವರಿ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಜಮ್‌ ಖಾನ್, ಅವರ ಪತ್ನಿ ಮತ್ತು ಪುತ್ರನನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ಜೈಲಿನಲ್ಲಿರಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು