ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ವಾಯುನೆಲೆ ಮೇಲೆ ಬಾಂಬ್‌ ದಾಳಿ; ಹತ್ತಿರದಿಂದಲೇ ಹಾರಿದ್ದವೇ ಡ್ರೋನ್‌ಗಳು?

ಅಕ್ಷರ ಗಾತ್ರ

ನವದೆಹಲಿ: ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯು ಪಡೆ ಕೇಂದ್ರವೊಂದರ ಮೇಲೆ ಭಾನುವಾರ ಬೆಳಿಗ್ಗಿನ ಜಾವ 1.40ಕ್ಕೆ ಎರಡು ಬಾಂಬ್‌ ಎಸೆಯಲಾಗಿದೆ. ಸ್ಫೋಟಕ ಎಸೆಯಲು ಬಳಸಿರುವ ಡ್ರೋನ್‌ಗಳನ್ನು ವಾಯು ನೆಲೆಯ ಸಮೀಪದಿಂದಲೇ ಹಾರಾಟ ನಡೆಸಿರುವುದಾಗಿ ಶಂಕಿಸಲಾಗಿದೆ.

ದಾಳಿಗೆ ಉಗ್ರರು ಬಳಸಿರುವ ಡ್ರೋನ್‌ಗಳು ಚಿಕ್ಕ ಗಾತ್ರದ ಕ್ವಾಡ್‌ಕಾಪ್ಟರ್‌ಗಳಾಗಿದ್ದು (ನಾಲ್ಕು ರೊಟಾರ್‌ಗಳುಳ್ಳ), ಸುಧಾರಿತ ಸ್ಫೋಟಕಗಳನ್ನು ಹೊತ್ತು ವಾಯು ಪಡೆ ಕೇಂದ್ರದ ಮೇಲೆ ದಾಳಿ ನಡೆಸಲು ವಾಯು ನೆಲೆಗೆ ಹತ್ತಿರದಿಂದಲೇ ಹಾರಾಟ ಆರಂಭಿಸಿರುವ ಸಾಧ್ಯತೆ ಇರುವುದಾಗಿ ಮೂಲಗಳಿಂದ ತಿಳಿದು ಬಂದಿದೆ ಎಂದು 'ಇಂಡಿಯಾ ಟುಡೇ ಟಿವಿ' ವರದಿ ಮಾಡಿದೆ.

ಪೊಲೀಸರು ಹಾಗೂ ಹಲವು ಸಂಸ್ಥೆಗಳು ತನಿಖೆಯಲ್ಲಿ ಭಾಗಿಯಾಗಿವೆ. ಉಗ್ರರ ಸಂಭಾವ್ಯ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ದೇಶದ ಎಲ್ಲ ವಾಯು ನೆಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಾಳಿಗೆ ಎರಡು ಡ್ರೋನ್‌ಗಳನ್ನು ಬಳಸಲಾಗಿದೆ, ಆರು ನಿಮಿಷಗಳ ಅಂತರದಲ್ಲಿ ಎರಡು ಬಾಂಬ್‌ ದಾಳಿಗಳು ನಡೆದಿವೆ. ವಾಯು ಪಡೆಯ ಇಬ್ಬರು ಯೋಧರು ದಾಳಿಯಲ್ಲಿ ಗಾಯಗೊಂಡಿದ್ದಾರೆ, ವಿಮಾನಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT