ಬುಧವಾರ, ಮೇ 12, 2021
18 °C

ಜಮ್ಮು–ಕಾಶ್ಮೀರ: ರಾಮ ಮಂದಿರ ನಿರ್ಮಾಣಕ್ಕಾಗಿ ₹17 ಕೋಟಿ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮಮಂದಿರ -ಸಾಂದರ್ಭಿಕ ಚಿತ್ರ

ಶ್ರೀನಗರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜಮ್ಮು ಮತ್ತು ಕಾಶ್ಮೀರವು ₹17 ಕೋಟಿ ದೇಣಿಗೆ ನೀಡಿದೆ.

‘ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನದ ಭಾಗವಾಗಿ ಜಮ್ಮು ಕಾಶ್ಮೀರವು ₹17 ಕೋಟಿ ದೇಣಿಗೆ ನೀಡಿದೆ’ ಎಂದು ಪ್ರಾಂತ ಸಹ ಸಂಘಚಾಲಕ ಗೌತಮ್‌ ಮೆಂಗಿ ತಿಳಿಸಿದ್ದಾರೆ.

‘ಸುಮಾರು 44 ದಿನಗಳ ಸುದೀರ್ಘ ಅಭಿಯಾನದಲ್ಲಿ 21,331 ಆರ್‌ಎಸ್‌ಎಸ್ ಕಾರ್ಯಕರ್ತರು ಕೇಂದ್ರಾಡಳಿತ ಪ್ರದೇಶದ 4693 ಹಳ್ಳಿಗಳು ಮತ್ತು ಪಟ್ಟಣಗಳಲ್ಲಿನ ಸುಮಾರು 6.37 ಲಕ್ಷ ಮನೆಗಳಿಗೆ ಭೇಟಿ ನೀಡಿ, ದೇಣಿಗೆ ಸಂಗ್ರಹಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಈ ರಾಮಮಂದಿರವೂ ಕೇವಲ ದೇವಾಲಯವಲ್ಲ. ಇದು ಭಾರತೀಯ ಸಂಸ್ಕೃತಿಯ ಭಾಗ. ಕೋವಿಡ್‌ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಜಮ್ಮು ಮತ್ತು ಕಾಶ್ಮೀರದ 2,902 ಹಳ್ಳಿ ಮತ್ತು ಪಟ್ಟಣಗಳಿಗೆ 1.97 ಲಕ್ಷ ಆಹಾರ ಪೊಟ್ಟಣ, 4567 ಸ್ಯಾನಿಟೈಸರ್‌, 1.36 ಲಕ್ಷ ಮಾಸ್ಕ್‌, 58,716 ಪಡಿತರ ಕಿಟ್‌ ಮತ್ತು 510 ಪಿಪಿಇ ಕಿಟ್‌ ವಿತರಿಸಿದ್ದರು’ ಎಂದು ತಿಳಿಸಿದ್ದಾರೆ.

ಜನವರಿ 15 ರಂದು ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನ ಪ್ರಾರಂಭಗೊಂಡು, ಫೆಬ್ರುವರಿ 27ರಂದು ಮುಕ್ತಾಯಗೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು