ಗುರುವಾರ , ಏಪ್ರಿಲ್ 15, 2021
22 °C

ಜಮ್ಮು ಮತ್ತು ಕಾಶ್ಮೀರ: ಒಂಬತ್ತು ಉಗ್ರರ ಪಟ್ಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಒಂಬತ್ತು ಉಗ್ರರ ಪಟ್ಟಿಯ ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ. 

ಕಾಶ್ಮೀರ ಪೊಲೀಸರು ತಮ್ಮ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಉಗ್ರರ ಹೆಸರು ಹಾಗೂ ಅವರ ಫೋಟೊವನ್ನು ಹಾಕಿ ಟ್ವೀಟ್‌ ಮಾಡಿದ್ದಾರೆ.  ಈ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಇವರು ವಿವಿಧ ಉಗ್ರಗಾಮಿ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ. ಈ ಉಗ್ರರ ಬಗ್ಗೆ ಸುಳಿವು ಸಿಕ್ಕರೆ ಮಾಹಿತಿ ಹಂಚಿಕೊಳ್ಳಲು ದೂರವಾಣಿ ಸಂಖ್ಯೆಗಳನ್ನು ಪೊಲೀಸರು ಹಂಚಿಕೊಂಡಿದ್ದಾರೆ.

ಆದಿಲ್ ಮುಷ್ತಾಕ್, ಮೊಹಮ್ಮದ್ ಅಬ್ಬಾಸ್ ಶೇಖ್, ವಾಸೀಮ್ ಖಾದಿರ್, ಬಿಲಾಲ್ ಅಹ್ಮದ್ ಭಟ್, ಉಬೈದ್ ಶಫಿ, ಇರ್ಫಾನ್ ಸೋಫಿ, ಸಾಕಿಬ್ ಮಂಜೂರ್, ಮೊಹಮ್ಮದ್ ಯೂಸುಫ್ ದಾರ್ ಮತ್ತು ಅಬ್ರಾರ್ ನದೀಮ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು