ಭಾನುವಾರ, ಜೂನ್ 26, 2022
23 °C

ಜಮ್ಮು–ಕಾಶ್ಮೀರ: ಉಗ್ರರ ಗುಂಡಿಗೆ ಕಲಾವಿದೆ ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಅಮ್ರೀನ್‌ ಭಟ್‌

ಶ್ರೀನಗರ: ಮಹಿಳೆಯೊಬ್ಬರನ್ನು ಉಗ್ರರು ಗುಂಡಿಕ್ಕಿ ಕೊಂದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅವರು ಜಿಲ್ಲೆಯ ಚಡೂರ ಪ್ರದೇಶದ ಹುಶ್ರೂ ನಿವಾಸಿ. ಅಮ್ರೀನ್‌ ಅವರ ಮನೆಯ ಬಳಿಯೇ ಉಗ್ರರು ಅವರ ಮೇಲೆ ರಾತ್ರಿ 8 ಗಂಟೆಗೆ ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಅಮ್ರೀನ್‌ ಜೊತೆ ಅವರ ಸೋದರ ಸಂಬಂಧಿ ಫರಾನ್‌ ಝುಬೈರ್‌ ಕೂಡಾ ಗಾಯಗೊಂಡಿದ್ದರು. ಅಮ್ರೀನ್‌ ಅವರನ್ನು ಚಡೂರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

ದಾಳಿ ನಡೆದ ಪ್ರದೇಶಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಉಗ್ರರನ್ನು ಪತ್ತೆ ಮಾಡಲು ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ಅಮ್ರೀನ್‌ ಭಟ್‌, ಅವರ ಗಾಯನ, ಕಿರುಚಿತ್ರ ಸೇರಿದಂತೆ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು