ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಭಾರತದ ಉಕ್ಕಿನ ಮನುಷ್ಯ' ಖ್ಯಾತಿಯ ಜಮ್ಶೆಡ್ ಜೆ ಇರಾನಿ ನಿಧನ

Last Updated 1 ನವೆಂಬರ್ 2022, 4:25 IST
ಅಕ್ಷರ ಗಾತ್ರ

ನವದೆಹಲಿ: ಸ್ಟೀಲ್ ಮ್ಯಾನ್ ಆಫ್ ಇಂಡಿಯಾ (ಭಾರತದ ಉಕ್ಕಿನ ಮನುಷ್ಯ) ಖ್ಯಾತಿಯ ಜಮ್ಶೆಡ್‌ ಜೆ ಇರಾನಿ ಅವರು ಸೋಮವಾರ ರಾತ್ರಿ ನಿಧನರಾದರು ಎಂದು ಟಾಟಾ ಸ್ಟೀಲ್‌ ತಿಳಿಸಿದೆ.

ಇರಾನಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರ ನಿಧನ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಟಾಟಾ ಸ್ಟೀಲ್‌, 'ಭಾರತದ ಉಕ್ಕಿನ ಮನುಷ್ಯ ನಿಧನರಾಗಿದ್ದಾರೆ.ಪದ್ಮಭೂಷಣ ಡಾ.ಜಮ್ಶೆಡ್ ಜೆ ಇರಾನಿ ಅವರ ನಿಧನದ ಸುದ್ದಿಯನ್ನು ಟಾಟಾ ಸ್ಟೀಲ್ತೀವ್ರ ದುಃಖದೊಂದಿಗೆ ತಿಳಿಸುತ್ತಿದೆ' ಎಂದು ಹೇಳಿದೆ.

ಜೆಮ್ಶೆಡ್‌ಪುರದಲ್ಲಿರುವ ಟಾಟಾ ಆಸ್ಪತ್ರೆಯಲ್ಲಿ ಅಕ್ಟೋಬರ್‌ 31ರ ರಾತ್ರಿ 10ರ ವೇಳೆಗೆ ಇರಾನಿ ನಿಧನರಾದರು ಎಂದೂ ಉಲ್ಲೇಖಿಸಿದೆ.

43 ವರ್ಷಗಳ ಕಾಲ ಕಂಪನಿಯ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಇರಾನಿ ಅವರು,2011ರ ಜೂನ್‌ನಲ್ಲಿ ಕಂಪನಿಯ ಮಂಡಳಿಯಿಂದನಿವೃತ್ತರಾಗಿದ್ದರು.

ಅವರುಜಿಜಿ ಇರಾನಿ ಮತ್ತು ಖೋರ್ಶೆಡ್‌ ಇರಾನಿ ದಂಪತಿಯ ಮಗನಾಗಿ1936ರ ಜೂನ್‌ 2ರಂದುನಾಗ್ಪುರದಲ್ಲಿ ಜನಿಸಿದ್ದರು.ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ 1956ರಲ್ಲಿ ಬಿಎಸ್‌ಸಿ ಮತ್ತುನಾಗ್ಪುರ ವಿಶ್ವವಿದ್ಯಾಲಯದಲ್ಲಿ 1958ರಲ್ಲಿಭೂವಿಜ್ಞಾನ ವಿಷಯದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದರು.

ಬಳಿಕಜೆಎನ್ ಟಾಟಾ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡ್‌ ತೆರಳಿ ಶೆಫಿಲ್ಡ್‌ವಿಶ್ವವಿದ್ಯಾಲಯದಲ್ಲಿಲೋಹಶಾಸ್ತ್ರ ವಿಭಾಗದಲ್ಲಿಸ್ನಾತಕೋತ್ತರ ಪದವಿ (1960) ಮತ್ತು ಪಿಎಚ್‌ಡಿ (1963) ಪೂರ್ಣಗೊಳಿಸಿದ್ದರು.

ಇಂಗ್ಲೆಂಡ್‌ನ ಶೆಫೀಲ್ಡ್‌ನಲ್ಲಿರುವ'ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್‌'ಗೆ ಸೇರುವ ಮೂಲಕ 1963ರಲ್ಲಿ ವೃತ್ತಿ ಜೀವನ ಆರಂಭಿಸಿದರು. ಬಳಿಕಸಂಶೋಧನೆ ಮತ್ತು ಅಭಿವೃದ್ಧಿಯ ಉಸ್ತುವಾರಿ ನಿರ್ದೇಶಕರ ಸಹಾಯಕರಾಗಿ 'ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿ'ಗೆ (ಈಗ ಟಾಟಾ ಸ್ಟೀಲ್) ಸೇರುವ ಮೂಲಕ 1968ರಲ್ಲಿ ಭಾರತಕ್ಕೆ ವಾಪಸ್ ಆದರು.

1978ರಲ್ಲಿ ಜನರಲ್‌ ಸೂಪರಿಂಟೆಂಡೆಂಟ್‌, 1979ರಲ್ಲಿಪ್ರಧಾನ ವ್ಯವಸ್ಥಾಪಕರು ಮತ್ತು 1985ರಲ್ಲಿ ಟಾಟಾ ಸ್ಟೀಲ್‌ ಅಧ್ಯಕ್ಷ ಸ್ಥಾನಕ್ಕೇರಿದರು. 1988ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು. 1992ರಲ್ಲಿವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿ 2001ರಲ್ಲಿ ನಿವೃತ್ತರಾಗುವ ವರೆಗೆ ಕರ್ತವ್ಯ ನಿರ್ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT