ಸೋಮವಾರ, ಮಾರ್ಚ್ 1, 2021
31 °C

ಚಹಾದಂಗಡಿ ತೆರೆದ ಭಗ್ನ ಪ್ರೇಮಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ(ಬಿಹಾರ): ಭಗ್ನ ಪ್ರೇಮಿಗಳಾದ ಇಬ್ಬರು ಗೆಳೆಯರು ಇಲ್ಲಿನ ಬೋರಿಂಗ್‌ ರಸ್ತೆಯಲ್ಲಿ ಚಹಾದಂಗಡಿ ತೆರೆದು ತಮ್ಮಂತೆಯೇ ಪ್ರಿಯತಮೆ ತೊರೆದು ಹೋದವರಿಗೆ ವಿಶೇಷ ರಿಯಾಯಿತಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

‘ಬೆವಾಫಾ ಚಾಯ್‌ ವಾಲ’ ಹೆಸರಿನಲ್ಲಿ ಚಹಾದಂಗಡಿ ತೆರೆದಿರುವ ಸಂದೀಪ್‌ ಮತ್ತು ಅಂಕಿತ್‌ ಎಂಬುವವರು ತಮ್ಮ ಚಹಾದಂಗಡಿಯಲ್ಲಿ ಸಾಮಾನ್ಯ ಗ್ರಾಹಕರಿಗೆ ₹15ಕ್ಕೆ ಹಾಗೂ ಭಗ್ನ ಪ್ರೇಮಿಗಳಿಗೆ ₹10ಕ್ಕೆ ಚಹಾ ನೀಡುತ್ತಿದ್ದಾರೆ.

ಯುವಕ, ಯುವತಿಯರು, ಕಚೇರಿಗೆ ತೆರಳುವವರು ಮತ್ತು ಕಚೇರಿಯಿಂದ ಮನೆಗೆ ಮರಳುವವರು ಈ ಚಹಾದಂಗಡಿಯ ನಿತ್ಯ ಗ್ರಾಹಕರಾಗಿದ್ದಾರೆ.

ಪ್ರೇಮಿಗಳ ದಿನದಂದು ಉದ್ಘಾಟನೆಗೊಂಡಿರುವ ಈ ಅಂಗಡಿಯು ಈಗ ಜನಪ್ರಿಯವಾಗಿದೆ ಎನ್ನುತ್ತಾರೆ ಗ್ರಾಹಕರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು