ಬುಧವಾರ, ಆಗಸ್ಟ್ 17, 2022
25 °C

ಗಡಿ ಪ್ರವೇಶಿಸಿದ್ದ ಸಹೋದರಿಯರು ಮರಳಿ ಪಾಕ್‌ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಅಜಾಗರುಕವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿದ್ದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಇಬ್ಬರು ಸಹೋದರಿಯರನ್ನು ಸೋಮವಾರ ವಾಪಸ್‌ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೈಬಾ ಜಬೈರ್ (17) ಮತ್ತು ಆಕೆಯ ಸಹೋದರಿ ಸನಾ ಜಬೈರ್ (13) ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಮೂಲಕ ದೇಶವನ್ನು ಪ್ರವೇಶಿಸಿದ್ದರು. ಪಾಕಿಸ್ತಾನದ ಕಹುಟಾ ತಹಸಿಲ್ ನಿವಾಸಿಗಳಾದ ಇವರನ್ನು ಭಾನುವಾರ ಸೇನೆ ವಶಕ್ಕೆ ಪಡೆದಿತ್ತು.

‘ಪಾಕಿಸ್ತಾನದ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಸಹೋದರಿಯರನ್ನು ಹಸ್ತಾಂತರಿಸಲಾಯಿತು. ಸೌಹಾರ್ದ ಸಂಕೇತವಾಗಿ ಅವರಿಗೆ ಸೇನೆಯು ಉಡುಗೊರೆ ಮತ್ತು ಸಿಹಿ ತಿಂಡಿಗಳನ್ನು ನೀಡಿತು’ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು