ಗುರುವಾರ , ಮಾರ್ಚ್ 30, 2023
32 °C

ಸಲಿಂಗಕಾಮಿಗಳಿದ್ದ ಜಾಹೀರಾತು‘ಸುಪ್ರೀಂ‘ ನ್ಯಾಯಮೂರ್ತಿ ಬೇಸರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಲಿಂಗಕಾಮಿಗಳನ್ನು ಒಳಗೊಂಡಂತೆ ಜಾಹೀರಾತು ರೂಪಿಸುವ ಮನಸ್ಥಿತಿ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಕರ್ವ ಚೌತ್‌’ ಹಬ್ಬ ಆಚರಿಸುವಂತೆ ಡಾಬರ್‌ ಸಂಸ್ಥೆಯು ರೂಪಿಸಿದ್ದ ಜಾಹೀರಾತು ವಿರುದ್ಧ ಈಚೆಗೆ ಆಕ್ರೋಶ ವ್ಯಕ್ತವಾಗಿತ್ತು. ‘ಈ ಜಾಹೀರಾತು ಮೂಲಕ ಕಂಪನಿಯು ಸಾರ್ವಜನಿಕ ಅಸಹಿಷ್ಣುತೆಗೆ ಕಾರಣವಾಗುತ್ತಿದೆ’ ಎಂದೂ ಅವರು ಹೇಳಿದರು. 

‘ಕಾನೂನು ಜಾಗೃತಿಯಿಂದ ಮಹಿಳಾ ಸಬಲೀಕರಣ‘ ವಿಷಯ ಕುರಿತಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಮಾತನಾಡುತ್ತಿದ್ದರು.

ಮಹಿಳೆಯರಿಗೆ ಸಂಬಂಧಿಸಿ ವಿಷಯಗಳ ಕುರಿತು ಕೇವಲ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಈ ಕುರಿತಂತೆ ಸಮಾಜದಲ್ಲಿನ ಯುವಕರಲ್ಲಿನ ಮನಸ್ಥಿತಿಯನ್ನು ಬದಲಿಸುವುದು ಕೂಡಾ ಅಗತ್ಯವಾಗಿದೆ ಎಂದೂ ಅವರು ಪ್ರತಿಪಾದಿಸಿದರು

ಸುಪ್ರೀಂ ಕೋ‌ರ್ಟ್‌ನ ನ್ಯಾಯಮೂರ್ತಿಗಳು ನಿಜ ಬದುಕಿನ ಹಲವು ಘಟನೆಗಳನ್ನು ಗಮನಿಸಿದ್ದಾರೆ. ಇದು, ಕಾನೂನಿನ ಸ್ಥಿತಿ ಮತ್ತು ಸಮಾಜದ ವಾಸ್ತವ ಸ್ಥಿತಿ ಭಿನ್ನವಾಗಿರುವುದನ್ನು ಬಿಂಬಿಸುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.

‘ಸಂವಿಧಾನ ಎಂಬುದು ಬದಲಾವಣೆಗೆ ಒಳಪಡುವ ದಾಖಲೆ. ಇದು, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬೇರೂರಿರುವ ಅನೇಕ ಸಾಂಸ್ಥಿಕ ಅಸಮಾನತೆಗಳಿಗೆ ಪರಿಹಾರ ನೀಡಬಲ್ಲದು. ಮಹಿಳೆಗೆ ಸಾರ್ವಜನಿಕವಾಗಿ ಘನತೆ ಮತ್ತು ಸಮಾನತೆಯನ್ನು ಒದಗಿಸಲು ಇದು ಪರಿಣಾಮಕಾರಿ ಸಾಧನ. ಮಹಿಳೆಗೆ ಸಾಂವಿಧಾನಿಕ ಹಕ್ಕು ಒದಗಿಸುವ ಈ ಗುರಿ ಸಾಧನೆಗಾಗಿ ಕೌಟುಂಬಿಕ ದೌರ್ಜನ್ಯ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆಗಳು ರಚನೆಯಾಗಿವೆ‘ ಎಂದೂ ಅವರು ಉಲ್ಲೇಖಿಸಿದರು.

ಹಿಂದೂಗಳ ಹಬ್ಬಗಳ ಆಚರಣೆಗೆ ಸಂಬಂಧಿಸಿದ ಜಾಹೀರಾತುಗಳ ವಿರುದ್ಧ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿರುವ ಅನೇಕ ನಿದರ್ಶನಗಳಿವೆ. ಇಂಥ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಈಚೆಗೆ ಮಧ್ಯಪ್ರದೇಶದ ಸಚಿವ ನರೋತ್ತಮ್‌ ಮಿಶ್ರಾ ಎಚ್ಚರಿಕೆಯನ್ನು ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು