ಶುಕ್ರವಾರ, ಮೇ 27, 2022
25 °C

ಕೇರಳ: ಸುಧಾಕರನ್‌ ಕಾಂಗ್ರೆಸ್‌ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಸಂಸದ ಕೆ.ಸುಧಾಕರನ್‌ ಅವರನ್ನು ನೇಮಿಸಲಾಗಿದೆ.

ಇದುವರೆಗೆ ಮುಲ್ಲಪ್ಪಲ್ಲಿ ರಾಮಚಂದ್ರನ್‌ ಅವರು ಅಧ್ಯಕ್ಷರಾಗಿದ್ದರು. ಪಕ್ಷದಲ್ಲಿನ ಗುಂಪುಗಾರಿಕೆ ತಡೆಯುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಾಗಿದೆ ಎನ್ನುವ ಸಂದೇಶವನ್ನು ವರಿಷ್ಠರು ನೀಡಿದ್ದಾರೆ ಎಂದು ಹೇಳಲಾಗಿದೆ.

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಿರಿಯ ನಾಯಕ ರಮೇಶ್‌ ಚೆನ್ನಿಥಾಲ್‌ ಅವರನ್ನು ಬದಲಾಯಿಸಿ, ವಿ.ಡಿ.ಸತೀಸನ್‌ ಅವರನ್ನು ಇತ್ತೀಚೆಗಷ್ಟೇ ನೇಮಿಸಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಅಧ್ಯಕ್ಷರ ಬದಲಾವಣೆ ನಡೆದಿದೆ.

ರಮೇಶ್‌ ಚೆನ್ನಿಥಾಲ್‌ ಮತ್ತು ಉಮನ್‌ ಚಾಂಡಿ ಅವರ ಗುಂಪುಗಳಲ್ಲಿ ಸುಧಾಕರನ್‌ ಮತ್ತು ಸತೀಸನ್‌ ಅವರು ಗುರುತಿಸಿಕೊಂಡಿರಲಿಲ್ಲ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಕ್‌ ಅನ್ವರ್‌ ಅವರು ನೀಡಿದ ವರದಿ ಅನ್ವಯ ಸುಧಾಕರನ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು