ಲಖನೌ (ಪಿಟಿಐ): ವಾರ್ಷಿಕ ಕನ್ವರ್ ಯಾತ್ರಾದಲ್ಲಿ ಸೀಮಿತ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮನವಿ ಮಾಡಿದ್ದಾರೆ. ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಮೂರನೇ ಅಲೆಯಲ್ಲಿ ಸೋಂಕು ಹಬ್ಬಲು ಈ ಯಾತ್ರೆ ಕಾರಣವಾಗಬಹುದು ಎಂಬ ಆತಂಕದ ನಡುವೆಯೂ ಜುಲೈ 25ರಿಂದ ಯಾತ್ರೆಯನ್ನು ಆಯೋಜಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಯಾತ್ರೆಯಲ್ಲಿ ಭಾಗವಹಿಸುವವರು ನೆಗೆಟಿವ್ ವರದಿ ಹಾಜರುಪಡಿಸಬೇಕು ಎಂಬುದನ್ನು ಕಡ್ಡಾಯಪಡಿಸಿದೆ.

ಪ್ರತಿ ವರ್ಷ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶಿವನ ಭಕ್ತರು ಯಾತ್ರೆಗೆ ಬರುತ್ತಾರೆ. ತಮ್ಮ ಊರಿನಲ್ಲಿ ಪೂಜೆ ಸಲ್ಲಿಸಲು ಹರಿದ್ವಾರದಲ್ಲಿ ಗಂಗಾನದಿಯಿಂದ ನೀರು ಒಯ್ಯುತ್ತಾರೆ. ಈ ಬಾರಿ ಯಾತ್ರೆಯು ಕೋವಿಡ್ ಮಾರ್ಗಸೂಚಿಯನ್ವಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.