ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಕೋವಿಡ್ ಪ್ರಕರಣಗಳ ಭಾರಿ ಏರಿಕೆ: ದೈನಂದಿನ ಪ್ರಕರಣ 3 ತಿಂಗಳ ಗರಿಷ್ಠ

Last Updated 25 ಆಗಸ್ಟ್ 2021, 14:16 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ ಕೋವಿಡ್ ಪ್ರಕರಣ ಬುಧವಾರ ಭಾರಿ ಏರಿಕೆ ಕಂಡಿದ್ದು, ಒಂದೇ ದಿನ 31,445 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 215 ಸೋಂಕಿತರು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇ 19 ದಾಟಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 38,83,429 ತಲುಪಿದೆ. ಇಂದಿನ ವರೆಗೆ 19,972 ಸೋಂಕಿತರು ಅಸುನೀಗಿದ್ದಾರೆ. ಈ ಹಿಂದೆ ಮೇ 20ರಂದು ಕೇರಳದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 30 ಸಾವಿರ ದಾಟಿತ್ತು.

ಓಣಂ ಹಬ್ಬದ ಬಳಿಕ ಪಾಸಿಟಿವಿಟಿ ದರ ಶೇ 20 ದಾಟಬಹುದು ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದರು.

ಬಕ್ರೀದ್‌ ಸಂದರ್ಭದಲ್ಲಿ ಕೆಲವು ದಿನಗಳ ಮಟ್ಟಿಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಜುಲೈ ಕೊನೆಗೆ ಪ್ರತಿ ದಿನ ಕೋವಿಡ್ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಲು ಆರಂಭವಾಗಿತ್ತು.

ಬುಧವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 20,271 ಸೋಂಕಿತರು ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 36,92,628 ಮಂದಿ ಗುಣಮುಖರಾದಂತಾಗಿದೆ. ಸದ್ಯ ಕೇರಳದಲ್ಲಿ 1,70,292 ಸಕ್ರಿಯ ಪ್ರಕರಣಗಳಿವೆ.

24 ಗಂಟೆ ಅವಧಿಯಲ್ಲಿ 1,65,273 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ಒಟ್ಟು 3,06,19,046 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎರ್ನಾಕುಲಂನಲ್ಲಿ ಅತಿಹೆಚ್ಚು, ಅಂದರೆ 4,048 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ, ತ್ರಿಶೂರ್‌ನಲ್ಲಿ 3,865, ಕೋಯಿಕ್ಕೋಡ್‌ನಲ್ಲಿ 3,680, ಮಲಪ್ಪುರಂನಲ್ಲಿ 3,502, ಪಾಲಕ್ಕಾಡ್‌ನಲ್ಲಿ 2,562, ಕೊಲ್ಲಂನಲ್ಲಿ 2,479, ಕೊಟ್ಟಾಯಂನಲ್ಲಿ 2,050, ಕಣ್ಣೂರಿನಲ್ಲಿ 1,930, ಆಲಪ್ಪುಳದಲ್ಲಿ 1,874, ತಿರುವನಂತಪುರದಲ್ಲಿ 1,700, ಇಡುಕ್ಕಿಯಲ್ಲಿ 1,166, ಪತ್ತನಂತಿಟ್ಟದಲ್ಲಿ 1,008, ವಯನಾಡ್‌ನಲ್ಲಿ 962 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT