ತಿರುವನಂತಪುರ: ಹೆಣ್ಣು ಮತ್ತುಗಂಡು ಮಕ್ಕಳು ಒಟ್ಟಿಗೆ ಕೂರಬಾರದೆಂದು ಬಸ್ ನಿಲ್ದಾಣದ ಬೆಂಚ್ ಅನ್ನು ಕತ್ತರಿಸಿ ಪ್ರತ್ಯೇಕಗೊಳಿಸಿದ್ದ ಸ್ಥಳೀಯರ ಅನೈತಿಕ ಪೊಲೀಸ್ಗಿರಿ ವಿರುದ್ಧ ಕೇರಳದ ತಿರುವನಂತಪುರದ ವಿದ್ಯಾರ್ಥಿಗಳು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ.

ಹುಡುಗರ ತೊಡೆ ಮೇಲೆ ಹುಡುಗಿಯರು ಕುಳಿತುಕೊಂಡು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಗಳು ಇದೀಗ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ತಿರುವನಂತಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಒಟ್ಟೊಟ್ಟಿಗೆ ಕುಳಿತುಕೊಳ್ಳುವುದು ಮತ್ತು ಒಟ್ಟಿಗೆ ಬಸ್ಸಿನಲ್ಲಿ ಹೋಗುವುದನ್ನು ಕಂಡು ಅಲ್ಲಿನ ಸ್ಥಳೀಯರು ರಾತ್ರೋರಾತ್ರಿ ಸ್ಟೀಲ್ ಬೆಂಚ್ ಅನ್ನು ಕತ್ತರಿಸಿ ಪ್ರತ್ಯೇಕಗೊಳಿಸಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯರ ವರ್ತನೆಗೆ ವಿದ್ಯಾರ್ಥಿಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದೆ.

ವಿದ್ಯಾರ್ಥಿಗಳ ನಡೆಯನ್ನು ತಿರುವನಂತಪುರದ ಮೇಯರ್ ಆರ್ಯ ಎಸ್ ರಾಜೇಂದ್ರನ್ ಪ್ರಶಂಸಿಸಿದ್ಧಾರೆ. ವಿದ್ಯಾರ್ಥಿಗಳ ತೊಡೆ ಮೇಲೆ ವಿದ್ಯಾರ್ಥಿನಿಯರು ಕುಳಿತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಮೇಯರ್, ಬೆಂಚ್ ಅನ್ನು ಮೂರು ಭಾಗಗಳಾಗಿ ಕತ್ತರಿಸಿದ್ದು ಸರಿಯಲ್ಲ. ಕೇರಳದಂತಹ ಪ್ರಗತಿಪರ ಸಮಾಜದಲ್ಲಿ ಸ್ವೀಕಾರರ್ಹವಲ್ಲ ಎಂದು ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಒಟ್ಟಿಗೆ ಕೂರುವುದಕ್ಕೆ ಯಾವುದೇ ನಿಷೇಧವಿಲ್ಲ. ಆ ರೀತಿಯ ನಿಯಮ ಬೇಕೆಂದು ಬಯಸುವವರು ಈಗಲೂ ಪ್ರಾಚೀನ ಮನಸ್ಥಿತಿಯಲ್ಲೇ ಇರುತ್ತಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.