ಮಂಗಳವಾರ, ಆಗಸ್ಟ್ 16, 2022
20 °C

ಬಾಲಕಿ ಮೇಲೆ ಅತ್ಯಾಚಾರ; ವೃದ್ಧನಿಗೆ 81 ವರ್ಷ ಜೈಲು ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಡುಕ್ಕಿ: ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕ ರಣಕ್ಕೆ ಸಂಬಂಧಿಸಿದಂತೆ ಕೇರಳದ ತ್ವರಿತಗತಿ ನ್ಯಾಯಾಲಯವು 66 ವರ್ಷದ ವ್ಯಕ್ತಿಯೊಬ್ಬರಿಗೆ 81 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. 

ಇದರ ಜತೆಗೆ ಅಪರಾಧಿಗೆ ₹ 2.2 ಲಕ್ಷ ದಂಡವನ್ನೂ ವಿಧಿಸಿ ಪೋಕ್ಸೊ ಪ್ರಕ ರಣಗಳ ವಿಶೇಷ ನ್ಯಾಯಾಧೀಶ ಟಿ.ಜಿ. ವರ್ಗೀಸ್‌  ಆದೇಶಿಸಿದ್ದಾರೆ.  ಶಿಕ್ಷೆಯನ್ನು ಅಪರಾಧಿ ಏಕಕಾಲದಲ್ಲಿ ಅನುಭವಿಸಬೇಕಾಗಿದೆ. 2020ರ ಅಕ್ಟೋಬರ್‌ ನಲ್ಲಿ ಬಾಲಕಿ ಆಸ್ಪತ್ರೆಗೆ ದಾಖಲಾದಾಗ, ಆಕೆ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಆಗ ಬಾಲಕಿಗೆ 15 ವರ್ಷ ವಾಗಿತ್ತು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು.

ಸಂತ್ರಸ್ತೆಯ ಹೇಳಿಕೆ ಮತ್ತು ಗರ್ಭಪಾತದ ಬಳಿಕ ಭ್ರೂಣದಿಂದ ಸಂಗ್ರಹಿಸಿದ ಡಿಎನ್‌ಎ ಪುರಾವೆಗಳ ಆಧಾರದ ಮೇಲೆ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ. ಈ ಪುರಾವೆಗಳು ಆ ವ್ಯಕ್ತಿಯು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬುದನ್ನು ದೃಢಪಡಿಸಿವೆ ಎಂದು ಅವರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು