ಭಾನುವಾರ, ಏಪ್ರಿಲ್ 2, 2023
33 °C

ಎನ್‌ಐಎ ಎದುರು ಹಾಜರಾದ ಕೇರಳದ ಸಚಿವ ಜಲೀಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕೆ.ಟಿ.ಜಲೀಲ್ -ಸಂಗ್ರಹ ಚಿತ್ರ

ಕೊಚ್ಚಿ: ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್‌ ಅವರು ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡದ ಎದುರು ಗುರುವಾರ ಹಾಜರಾದರು.

ಜಲೀಲ್‌ ಅವರು ಖಾಸಗಿ ಕಾರಿನಲ್ಲಿ ಗುರುವಾರ ಬೆಳಿಗ್ಗೆ 6 ಗಂಟೆಗೆ ಎನ್‌ಐಎ ಕಚೇರಿಗೆ ಬಂದ ದೃಶ್ಯಾವಳಿಗಳು ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿವೆ.

ಈ ಬೆಳವಣಿಗೆ ಕುರಿತು ಎನ್‌ಐಎ ಹಾಗೂ ಸಚಿವರ ಕಾರ್ಯಾಲಯದಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಕಳೆದ ವರ್ಷ ಕೇರಳದಲ್ಲಿ ಸಂಭವಿಸಿದ್ದ ಪ್ರವಾಹದಿಂದಾಗಿ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದರು. ಸಂತ್ರಸ್ತರಿಗೆ ವಿತರಿಸಲು ಜಲೀಲ್‌, ಅರಬ್‌ ಸಂಯುಕ್ತ ರಾಷ್ಟ್ರಗಳಿಂದ ಸುಮಾರು 300 ಪರಿಹಾರ ಕಿಟ್‌ ಹಾಗೂ ಕುರಾನ್‌ ಪ್ರತಿಗಳನ್ನು ತರಿಸಿದ್ದರು. ರಾಜತಾಂತ್ರಿಕ ಬ್ಯಾಗೇಜ್‌ ಮೂಲಕ ಇವುಗಳನ್ನು ಅಕ್ರಮವಾಗಿ ತರಿಸಲಾಗಿತ್ತು ಎಂಬ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಜಲೀಲ್‌ ಕಳೆದ ಶುಕ್ರವಾರ ಜಾರಿ ನಿರ್ದೇಶನಾಲಯದ (ಇಡಿ) ಎದುರು ವಿಚಾರಣೆಗೆ ಹಾಜರಾಗಿದ್ದರು.

ಜಲೀಲ್‌ ರಾಜೀನಾಮೆಗೆ ಒತ್ತಾಯಿಸಿ ರಾಜ್ಯದಲ್ಲಿ ನಡೆದಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. 

‘ಇಡೀ ಜಗತ್ತೇ ವಿರೋಧ ವ್ಯಕ್ತಪಡಿಸಿದರೂ ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ. ಅದನ್ನು ಬಿಟ್ಟು ಬೇರೇನೂ ಸಂಭವಿಸುವುದಿಲ್ಲ’ ಎಂದು ಜಲೀಲ್‌ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು