ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ಹಾಕಿದ ಪೊಲೀಸ್!

Last Updated 10 ಸೆಪ್ಟೆಂಬರ್ 2022, 11:17 IST
ಅಕ್ಷರ ಗಾತ್ರ

ತಿರುವನಂತಪುರ: ಎಲೆಕ್ಟ್ರಿಕ್ ವಾಹನ ಒಂದಕ್ಕೆ ವಾಯು ಮಾಲಿನ್ಯ ಪ್ರಮಾಣಪತ್ರ (ಪಿಯುಸಿ) ಕೊಟ್ಟಿಲ್ಲ ಎಂದುಟ್ರಾಫಿಕ್ ಪೊಲೀಸರು ದಂಡ ಹಾಕಿರುವ ವಿಲಕ್ಷಣ ಘಟನೆ ಕೇರಳದಲ್ಲಿ ನಡೆದಿದೆ.

ಅಸಲಿಗೆಎಲೆಕ್ಟ್ರಿಕ್ ವಾಹನಗಳಿಗೆಪಿಯುಸಿ ಪ್ರಮಾಣಪತ್ರ ಅಗತ್ಯ ಇಲ್ಲ.

ಆದರೆ, ಕೇರಳದ ಮಣಪ್ಪುರಂ ಜಿಲ್ಲೆಯ ನೀಲಾಂಚರಿಯಲ್ಲಿ ಯುವಕನೊಬ್ಬ ‘ಏಥರ್’ ಕಂಪನಿಯತನ್ನಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಸ್ಥಳೀಯ ಟ್ರಾಫಿಕ್ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ₹250 ದಂಡ ವಿಧಿಸಿ ರಶೀದಿ ಕೊಟ್ಟಾಗ ಯುವಕ ಹೌಹಾರಿದ್ದಾನೆ.

ಪರಿಶೀಲನೆ ವೇಳೆ ಪಿಯುಸಿ ಪ್ರಮಾಣಪತ್ರ ನೀಡಿಲ್ಲ ಎಂದು ಟ್ರಾಫಿಕ್ ಪೊಲೀಸರು ದಂಢ ವಿಧಿಸಿದ್ದಾರೆ. ಯುವಕನಿಗೂ ಕೂಡ ಮನೆಗೆ ಬಂದು ರಶೀದಿ ನೋಡಿದಾಗ ಪೊಲೀಸರ ಪ್ರಮಾದ ಗೊತ್ತಾಗಿದೆ.

ಯುವಕ ಇದೇ ರಶೀದಿಯನ್ನು ಟ್ವಿಟರ್‌ನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿ, ‘ಸ್ವಾಮಿ, ಎಲೆಕ್ಟ್ರಿಕ್ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಕಡ್ಡಾಯ ಮಾಡಿರುವಿರಾ ಹೇಗೆ?‘ ಎಂದು ಪ್ರಶ್ನಿಸಿದ್ದಾನೆ.

ಇನ್ನು ಈ ಪ್ರಮಾದ ಬೆಳಕಿಗೆ ಬಂದ ನಂತರ ಸ್ಪಷ್ಟನೆ ನೀಡಿರುವಮಣಪ್ಪುರಂ ಜಿಲ್ಲೆಯ ಪೊಲೀಸರು, ಇದು ಸಿಬ್ಬಂದಿ ಅಚಾತುರ್ಯದಿಂದ ಆಗಿರುವ ಘಟನೆ. ಅಸಲಿಗೆ ಯುವಕ ಡಿಎಲ್ ಪ್ರಸ್ತುತಪಡಿಸದಿದ್ದಕ್ಕೆ ದಂಡ ವಿಧಿಸಲಾಗಿತ್ತು. ದಂಡ ನೀಡುವಾಗ ಮಷಿನ್‌ನಲ್ಲಿ ಆದ ಎಡವಟ್ಟಿನಿಂದ ಹೀಗೆ ಆಗಿದೆ ಎಂದಿದ್ದಾರೆ.

ಇನ್ನು ಕೇರಳ ಟ್ರಾಫಿಕ್ ಪೊಲೀಸರ ಈ ಎಡವಟ್ಟನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT