Covid-19 India Update: ಕೇರಳದಲ್ಲಿ ಕೊರೊನಾ ಕೇಕೆ, ದೇಶದಲ್ಲಿ 46,164 ಪ್ರಕರಣ

ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 46,164 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,33,725 ಕ್ಕೆ ಏರಿದೆ ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಇದೇ ಅವಧಿಯಲ್ಲಿ ದೇಶದಾದ್ಯಂತ 607 ಮಂದಿ ಮೃತಪಟ್ಟಿದ್ದಾರೆ.
ಕೇರಳ ರಾಜ್ಯ ಒಂದರಲ್ಲೇ 31,445 ಹೊಸ ಪ್ರಕರಣ ಮತ್ತು 215 ಸಾವು ಸಂಭವಿಸಿರುವುದು ದೇಶದ ದೈನಂದಿನ ಕೋವಿಡ್ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಈ ಮೂಲಕ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 3,25,58,530ಕ್ಕೆ ಜಿಗಿದಿದ್ದು, ಮೃತರ ಒಟ್ಟು ಸಂಖ್ಯೆ 4,36,365 ರಷ್ಟಾಗಿದೆ.
India reports 46,164 new #COVID19 cases, 34,159 recoveries and 607 deaths in the last 24 hrs, as per Health Ministry.
Total cases: 3,25,58,530
Total recoveries: 3,17,88,440
Active cases: 3,33,725
Death toll: 436365Total vaccinated: 60,38,46,475 (80,40,407) in last 24 hrs pic.twitter.com/sWNTEna5mu
— ANI (@ANI) August 26, 2021
ಸಕ್ರಿಯ ಪ್ರಕರಣಗಳ ಶೇಕಡವಾರು ಪ್ರಮಾಣ 1.03 ರಷ್ಟಿದ್ದರೆ, ಚೇತರಿಕೆ ಪ್ರಮಾಣ ಶೇಕಡಾ.97.63ರಷ್ಟಿದೆ.
ದೈನಂದಿನ ಕೋವಿಡ್ ಪಾಸಿಟಿವ್ ದರವು ಶೇ. 2.58ರಷ್ಟಿದ್ದು, ಕಳೆದ 31 ದಿನಗಳಿಂದ ಶೇಕಡಾ ಮೂರಕ್ಕಿಂತ ಕಡಿಮೆ ಇದೆ.
24 ಗಂಟೆಗಳಲ್ಲಿ 80,40,407 ಡೋಸ್ ಸೇರಿ ಈವರೆಗೆ ದೇಶದಲ್ಲಿ 60,38,46,475 ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.