ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೂ ಕಿಸಾನ್ ಕಾರ್ಡ್ ಸೌಲಭ್ಯ ವಿಸ್ತರಣೆ: ಸಚಿವ ಮುರುಗನ್

ತಮಿಳುನಾಡಿನಲ್ಲಿ ಕಡಲಕಳೆ ಪಾರ್ಕ್‌ಗೆ ಪ್ರೋತ್ಸಾಹ
Last Updated 24 ಅಕ್ಟೋಬರ್ 2021, 13:30 IST
ಅಕ್ಷರ ಗಾತ್ರ

ಹೈದರಾಬಾದ್: ಎಲ್ಲ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ (ಕೆಸಿಸಿ) ಪ್ರಯೋಜನವನ್ನು ವಿಸ್ತರಿಸಲು ಪ್ರಮಾಣಿತ ಕಾರ್ಯಚರಣಾ ಕಾರ್ಯ ವಿಧಾನಗಳು ಸಿದ್ಧವಾಗುತ್ತಿವೆ’ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆಯ ರಾಜ್ಯ ಸಚಿವ ಎಲ್. ಮುರುಗನ್ ಭಾನುವಾರ ಹೇಳಿದ್ದಾರೆ.

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ (ಎನ್‌ಎಫ್‌ಡಿಬಿ) ಚಟುವಟಿಕೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಸರ್ಕಾರವು ಈಗಾಗಲೇ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ವಿತರಿಸುತ್ತಿದೆ. ಮೀನುಗಾರರಿಗೂ ಈ ಸೌಲಭ್ಯವನ್ನು ವಿಸ್ತರಿಸಲು ಕಾರ್ಯ ರೂಪಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಸರ್ಕಾರವು ಸಮುದ್ರ ಆಹಾರ ಉತ್ಪನ್ನಗಳ ರಫ್ತು ಹೆಚ್ಚಿಸುವ ಯೋಜನೆ ಹೊಂದಿದೆ. ದೇಶದ ಐದು ಮೀನುಗಾರಿಕಾ ಬಂದರುಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಆಧುನೀಕರಿಸಿ ಸಂಸ್ಕರಣೆ ಘಟಕಗಳು, ಕೋಲ್ಡ್ ಸ್ಟೋರೇಜ್ ಇತರೆ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದೂ ಮುರುಗನ್ ಮಾಹಿತಿ ನೀಡಿದರು.

ಕಡಲಕಳೆ ಪಾರ್ಕ್‌: ‘ತಮಿಳುನಾಡಿನಲ್ಲಿ ಕಡಲಕಳೆ ಪಾರ್ಕ್ ಬರಲಿದೆ. ಇದು ಹೊಸ ಪರಿಕಲ್ಪನೆಯಾಗಿದ್ದು, ನಮ್ಮ ಸರ್ಕಾರವು ಕಡಲಕಳೆ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT