ಗುರುವಾರ , ಮೇ 13, 2021
18 °C
180 ಪ್ರಯಾಣಿಕರು ಅಪಾಯದಿಂದ ಪಾರು

ಚಕ್ರದಲ್ಲಿ ದೋಷ: ಟೇಬಲ್‌ ಟಾಪ್‌ ಕೋಯಿಕ್ಕೋಡ್‌ ಬದಲು ಕೊಚ್ಚಿಯಲ್ಲಿ ಇಳಿದ ವಿಮಾನ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ರಿಯಾದ್‌ನಿಂದ ಕೋಯಿಕ್ಕೋಡ್‌ಗೆ ಬರುತಿದ್ದ ‘ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌’ ವಿಮಾನವೊಂದು ಭಾನುವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಐಎಕ್ಸ್‌ 1322 ವಿಮಾನವು ಭಾನುವಾರ ಬೆಳಿಗ್ಗೆ 3.16ಕ್ಕೆ ಭೂ ಸ್ಪರ್ಶ ಮಾಡಿದ್ದು, ಇದರಲ್ಲಿ 180 ಪ್ರಯಾಣಿಕರು ಇದ್ದರು. ಅವರೆಲ್ಲ ಅಪಾಯದಿಂದ ಪಾರಾಗಿದ್ದಾರೆ.

‘ವಿಮಾನದ ಚಕ್ರವೊಂದರಲ್ಲಿ ದೋಷವನ್ನು ಗಮನಿಸಿದ ಪೈಲೆಟ್‌ ಕೋಯಿಕ್ಕೋಡ್‌ ಬದಲಾಗಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಿದ್ದಾರೆ. ವಿಮಾನದಿಂದ ಪ್ರಯಾಣಿಕರು ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಚಕ್ರ ಸ್ಫೋಟಿಸಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಕೋಯಿಕ್ಕೋಡ್‌ ವಿಮಾನ ನಿಲ್ದಾಣದ ರನ್‌ವೇ ‘ಟೇಬಲ್‌ ಟಾಪ್‌’ ಸ್ವರೂಪದ್ದಾಗಿದೆ. ಈ ರನ್‌ವೇ ಅತಿ ಕಡಿಮೆ ಜಾಗವನ್ನು ಹೊಂದಿದೆ. ಹಾಗಾಗಿ ಚಕ್ರದಲ್ಲಿ ದೋಷವನ್ನು ಗಮಿಸಿದ ಪೈಲೆಟ್‌, ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಕೋಯಿಕ್ಕೋಡ್‌ ಬದಲಿಗೆ ಕೊಚ್ಚಿಯಲ್ಲಿ ಇಳಿಸಿದರು.

ಬೆಟ್ಟವೊಂದನ್ನು ಕಡಿದು ಸಮತಟ್ಟುಗೊಳಿಸಿ ನಿರ್ಮಿಸುವ ರನ್‌ವೇಯನ್ನು ಟೇಬಲ್‌ ಟಾಪ್‌ ರನ್‌ವೇ ಎನ್ನುತ್ತಾರೆ.

ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೇರಳದ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು