ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ‌ ವಿಮಾನ ಅಪಘಾತ | ರನ್‌ವೇಗಿಂತ ಸಾವಿರ ಮೀಟರ್ ದೂರದಲ್ಲೇ ವಿಮಾನ ಭೂ ಸ್ಪರ್ಶ

Last Updated 8 ಆಗಸ್ಟ್ 2020, 6:47 IST
ಅಕ್ಷರ ಗಾತ್ರ

ನವದೆಹಲಿ: ದುಬೈನಿಂದ ಕೊಯಿಕ್ಕೋಡ್‌ಗೆ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಅಪಘಾತಕ್ಕೀಡಾಗುವ ಮೊದಲು ರನ್‌ವೇನಿಂದ ಸಾವಿರ ಮೀಟರ್‌ ದೂರದಲ್ಲಿರುವ ‘ಟಾಕ್ಸಿವೇ’ ಬಳಿ ಭೂ ಸ್ಪರ್ಶಿಸಿದೆ.

’ಕೊಯಿಕ್ಕೋಡ್‌ನಲ್ಲಿ ವಿಮಾನವನ್ನು ಭೂ ಸ್ಪರ್ಶ ಮಾಡಿಸುವಾಗ ಭಾರಿ ಮಳೆಯ ಕಾರಣದಿಂದಾಗಿ ಮೊದಲ ಪ್ರಯತ್ನದಲ್ಲಿ ಪೈಲಟ್‌ಗೆ ರನ್‌ವೇ ಸರಿಯಾಗಿ ಕಂಡಿಲ್ಲ. ಏರ್‌ಟ್ರಾಫಿಕ್ ಕಂಟ್ರೋಲರ್‌ ಮಾಹಿತಿ ಪ್ರಕಾರ, ಪೈಲಟ್‌ ಬದಲಿ ರನ್‌ವೇಗೆ ವಿನಂತಿಸಿದ್ದಾರೆ. ಆದರೂ ರನ್‌ವೇ ಸರಿಯಾಗಿ ಕಂಡಿಲ್ಲ. ಹೀಗಾಗಿ ರನ್‌ವೇ ಆರಂಭವಾಗುವ 1000 ಮೀಟರ್‌ ದೂರದಲ್ಲಿರುವ ‘ಟಾಕ್ಸಿವೇ’ ಸಮೀಪದಲ್ಲಿ ವಿಮಾನ ಭೂ ಸ್ಪರ್ಶ ಮಾಡಿದೆ’ ಎಂದು ಎಎಐ ವಕ್ತಾರರು ತಿಳಿಸಿದ್ದಾರೆ.

ಟೇಬಲ್ ಟಾಪ್‌ ರೀತಿ ಇರುವ ಕೊಯಿಕ್ಕೋಡ್‌ನ ವಿಮಾನ ನಿಲ್ದಾನವನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ವಹಣೆ ಮಾಡುತ್ತದೆ. ಸಾಮಾನ್ಯವಾಗಿ ಟೇಬಲ್ ಟಾಪ್ ವಿಮಾನ ನಿಲ್ದಾಣಗಳನ್ನು ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿರುತ್ತದೆ.

’ಏರ್‌ ಟ್ರಾಫಿಕ್ ನಿಯಂತ್ರಣಾಧಿಕಾರಿ ಅವರ ಮಾಹಿತಿ ಪ್ರಕಾರ ಟೇಬಲ್‌ ಟಾಪ್ ವಿಮಾನ ನಿಲ್ದಾಣದಲ್ಲಿನ ರನ್‌ವೇ 2700 ಮೀಟರ್ ಉದ್ದವಿದೆ. ಭಾರಿ ಮಳೆಯ ಕಾರಣದಿಂದಾಗಿ ಶುಕ್ರವಾರ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಭೂ ಸ್ಪರ್ಶ ಮಾಡುವ ಸಮಯದಲ್ಲಿ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 2000 ಮೀಟರ್‌ವರೆಗೆ ಮಾತ್ರ ರನ್‌ವೇ ಕಾಣುತ್ತಿತ್ತು’ ಎಂದು ವಕ್ತಾರರು ವಿವರಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT