ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ವರ್ಷದವಳಿದ್ದಾಗ ತಂದೆಯಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ: ನಟಿ ಖುಷ್ಬೂ

Last Updated 6 ಮಾರ್ಚ್ 2023, 10:04 IST
ಅಕ್ಷರ ಗಾತ್ರ

ಚೆನ್ನೈ: ನಟಿ ಹಾಗೂ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಬಹಿರಂಗ ಮಾಡಿದ್ದಾರೆ.

‘ನಾನು ಎಂಟು ವರ್ಷದವಳಿದ್ದಾಗ ನನ್ನ ತಂದೆ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದರು’ ಎಂದು ಹೇಳಿದ್ದಾರೆ.

ಪತ್ರಕರ್ತೆ ಬರ್ಕಾ ದತ್ ಅವರ ದಿ ಮೋಜೊ ಸ್ಟೋರಿಯ ‘ವಿ ದಿ ವುಮನ್’ ಸಂದರ್ಶನದಲ್ಲಿ ಖುಷ್ಬೂ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಖುಷ್ಬೂ ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

‘ನನ್ನ ತಂದೆ, ನನ್ನ ತಾಯಿಯನ್ನು ತುಂಬಾ ಹೊಡೆಯುವುದು, ಹಿಂಸೆ ನೀಡುವುದು ಮಾಡುತ್ತಿದ್ದರು. ಹೆಂಡತಿ–ಮಕ್ಕಳನ್ನು ಹೊಡೆಯುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆತ ಭಾವಿಸಿದ್ದ. ಕ್ರಮೇಣ ನಾನು 8 ವರ್ಷದವಳಿದ್ದಾಗ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡಲು ಪ್ರಯತ್ನಿಸುತ್ತಿದ್ದ. ಆದರೆ, ಅದನ್ನು ನಾನು ಬಲವಾಗಿ ವಿರೋಧಿಸುತ್ತಿದ್ದೆ. 15 ವರ್ಷವಳಾದಾಗ ತಂದೆಯ ವಿರುದ್ಧ ಮಾತನಾಡಲು ಆರಂಭಿಸಿದ್ದೆ’ ಎಂದು ಹೇಳಿದ್ದಾರೆ.

‘ನನ್ನ ಮೇಲೆ ಶೋಷಣೆ ನಡೆಯುವುದು ನನ್ನ ತಾಯಿ ಗಮನಕ್ಕೆ ಬಂದಿತ್ತು. ಆದರೆ, ಏನೇ ಆಗಲಿ ಪತಿಯೇ ಪರದೈವ ಎಂಬ ಮನೋಭಾವದ ಮಹಿಳೆ ಅವರಾಗಿದ್ದರು. ನಾನು 16 ವರ್ಷದವಳಿದ್ದಾಗ ತಂದೆ ನಮ್ಮನ್ನು ಬಿಟ್ಟು ಹೋದರು, ಮುಂದೆ ಅವರು ಏನಾದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

52 ವರ್ಷದ ಖುಷ್ಬೂ ಸುಂದರ್ ಬಾಲ್ಯದ ಹೆಸರು ನಖತ್ ಖಾನ್. ಮುಂಬೈನಲ್ಲಿ ಜನಿಸಿದ್ದ ಅವರು ಭಾರತೀಯ ಚಿತ್ರರಂಗದಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಬಹುತೇಕ ಎಲ್ಲ ಸೂಪರ್‌ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.

1993 ರಲ್ಲಿ ಖುಷ್ಬೂ ಅವರು ಶಿವಾಜಿ ಗಣೇಶನ್ ಅವರ ಮಗ ತಮಿಳು ನಟ ಪ್ರಭು ಅವರ ಜೊತೆ ಮದುವೆಯಾಗಿದ್ದರು. ಆದರೆ, ಆ ಮದುವೆಗೆ ಶಿವಾಜಿ ಗಣೇಶನ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾಗ ಪ್ರಭು ಅವರು ಖುಷ್ಬೂವಿಗೆ ವಿಚ್ಛೇದನ ನೀಡಿದ್ದರು. 2001ರಲ್ಲಿ ನಿರ್ಮಾಪಕ ಸುಂದರ್ ಸಿ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ ಆವಂತಿಕಾ ಹಾಗೂ ಆನಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಖುಷ್ಬೂ ಅವರು ಕನ್ನಡದಲ್ಲಿ ಶಾಂತಿ–ಕ್ರಾಂತಿ, ರಣಧೀರ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT