ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ಸಂಘಟನೆ‘ ಸ್ಥಾಪಿಸಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪುತ್ರ ತೇಜ್‌ಪ್ರತಾಪ್

Last Updated 7 ಸೆಪ್ಟೆಂಬರ್ 2021, 11:15 IST
ಅಕ್ಷರ ಗಾತ್ರ

ಪಟ್ನಾ: ಆರ್‌ಜೆಡಿ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಅವರು ಎರಡು ದಿನಗಳ ಹಿಂದೆ ‘ಛಾತ್ರ ಜನಶಕ್ತಿ ಪರಿಷತ್‌‘ ಎಂಬ ಹೊಸ ವಿದ್ಯಾರ್ಥಿ ಸಂಘಟನೆಯನ್ನು ಸ್ಥಾಪಿಸಿದ್ದಾರೆ.

ಈಗಾಗಲೇ ಆರ್‌ಜೆಡಿಯಲ್ಲಿ ಛಾತ್ರ ವಿದ್ಯಾರ್ಥಿ ಸಂಘಟನೆ ಎಂಬ ವಿಭಾಗವಿದೆ. ಇದು ಅದಕ್ಕೆ ಪರ್ಯಾಯವಾಗಿ ಆರಂಭಿಸಿರುವ ಸಂಘಟನೆ ಎಂದು ಹೇಳಲಾಗುತ್ತಿದೆ.

ಆದರೆ, ತೇಜ್‌ಪ್ರತಾಪ್ ಯಾದವ್, ‘ಇದು ಆರ್‌ಜೆಡಿಗೆ ಪಕ್ಷದ ವಿದ್ಯಾರ್ಥಿ ವಿಭಾಗದ ಪರ್ಯಾಯ ಸಂಘಟನೆಯಲ್ಲ. ಇದೊಂದು ವಿದ್ಯಾರ್ಥಿ ಸಂಘಟನೆ. ಮಾತೃಪಕ್ಷ ಆರ್‌ಜೆಡಿಯನ್ನು ಗ್ರಾಮ ಮಟ್ಟದಲ್ಲಿ ಬಲಗೊಳಿಸುವುದಕ್ಕಾಗಿ ಹಾಗೂ ಗ್ರಾಮ ಮಟ್ಟದಲ್ಲಿ ಯುವಕರನ್ನು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳುವುದು ಹಾಗೂ ರಾಜ್ಯದ ಹೊರಗೆ ಪಕ್ಷವನ್ನು ಸಂಘಟಿಸುವ ಸಂಸ್ಥೆ‘ ಎಂದು ತೇಜ್‌ಪ್ರತಾಪ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT