ಬುಧವಾರ, ಮಾರ್ಚ್ 29, 2023
32 °C

ನಾಯಿ ಸತ್ತರೆ ಶೋಕಿಸುವವರು ರೈತರ ಸಾವಿಗೆ ತಲೆಕೆಡಿಸಿಕೊಂಡಿಲ್ಲ: ಮೇಘಾಲಯ ರಾಜ್ಯಪಾಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಪುರ: ‘ಒಂದು ನಾಯಿ ಸತ್ತರೂ ಶೋಕಿಸುವ ದೆಹಲಿಯಲ್ಲಿರುವ ನಾಯಕರು ರೈತರ ಸಾವಿನ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ’ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್‌ ಟೀಕಿಸಿದ್ದಾರೆ.

ಇಲ್ಲಿ ನಡೆದ ‘ಜಾಗತಿಕ ಜಾಟ್‌ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ನೀಡುವ ಸಲುವಾಗಿ ರಾಜ್ಯಪಾಲ ಹುದ್ದೆ ತೊರೆಯಲು ಸಿದ್ಧನಿದ್ದೇನೆ’ ಎಂದೂ ಘೋಷಿಸಿದರು.

‘ರೈತರ ಬಗ್ಗೆ ನಾನು ಏನೇ ಮಾತನಾಡಿದರೂ ಅದು ವಿವಾದದ ರೂಪ ಪಡೆಯುತ್ತದೆ. ನಾನು ಈ ರೀತಿ ಮಾತನಾಡುವುದನ್ನೇ ‘ನನ್ನ ಹಿತೈಷಿ’ಗಳು ಕಾಯುತ್ತಿರುತ್ತಾರೆ’ ಎಂದರು. ಸೆಂಟ್ರಲ್‌ ವಿಸ್ತಾ ಯೋಜನೆಯನ್ನು ಟೀಕಿಸಿದ ಅವರು, ನೂತನ ಸಂಸತ್‌ ಭವನ ನಿರ್ಮಿಸುವ ಬದಲು ವಿಶ್ವದರ್ಜೆಯ ಕಾಲೇಜು ನಿರ್ಮಿಸಿಬೇಕಿತ್ತು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು