ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತನಾಗ್‌ ಜಿಲ್ಲೆಯ ಸಿರಹ್ಮಾ ಪ್ರದೇಶದಲ್ಲಿ ಎಲ್‌ಇಟಿ ಕಮಾಂಡರ್‌ ಹತ್ಯೆ

Last Updated 9 ಏಪ್ರಿಲ್ 2022, 4:43 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಸಿರಹ್ಮಾ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್‌–ಎ–ತೈಯಬಾದ(ಎಲ್‌ಇಟಿ) ಕಮಾಂಡರ್‌ ನಿಸಾರ್‌ ಅಹ್ಮದ್‌ ದಾರ್‌ ಹತ್ಯೆಯಾಗಿದ್ದಾನೆ.

‘ಕುಲ್ಗಾಂ ಜಿಲ್ಲೆಯ ರೆಡ್ವಾನಿ ಬಾಲಾ ಪ್ರದೇಶದ ನಿವಾಸಿಯಾದ ನಿಸಾರ್‌ ದಾರ್‌, ಸಿರಹ್ಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ತಿಳಿಸಿದರು.

‘ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಹಾಗೂ ಭಾರತೀಯ ಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅಡಗಿದ್ದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳ ಪ್ರತಿದಾಳಿಗೆ ಎಲ್‌ಇಟಿ ಕಮಾಂಡರ್‌ ಹತ್ಯೆಯಾಗಿದ್ದಾನೆ’ ಎಂದು ಅವರು ಹೇಳಿದರು.

‘2021ರಲ್ಲಿ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ನಿಸಾರ್ ದಾರ್‌, ಹಲವು ಅಪರಾಧ ಕೃತ್ಯ ಹಾಗೂ ಹತ್ಯೆಗಳಲ್ಲಿ ಭಾಗಿಯಾಗಿದ್ದ’ ಎಂದು ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಅನಂತನಾಗ್‌ ಜಿಲ್ಲೆಯ ಕೆಲವೆಡೆ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಇಬ್ಬರು ಯೋಧರು ಗಾಯ

ಕುಲ್ಗಾಂ ಜಿಲ್ಲೆಯ ಡಿ.ಎಚ್‌.ಪೋರಾದ ಚಾಕಿಸಮದ್‌ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ‘ಗಾಯಗೊಂಡವರನ್ನು ರೋಹಿತ್‌ ಯಾದವ್‌,ಅಂಕೇಶ್‌ಕುಮಾರ್‌ ಎಂದು ಗುರುತಿಸಲಾಗಿದ್ದು,ಇಬ್ಬರಿಗೂ ತೊಡೆಯ ಭಾಗದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT