ನವದೆಹಲಿ: ಚಿರಾಗ್ ಪಾಸ್ವಾನ್ ಮತ್ತು ಪಶುಪತಿ ಕುಮಾರ್ ಪರಾಸ್ ಅವರ ಬಣಗಳಿಗೆ ಪ್ರತ್ಯೇಕ ಹೆಸರು ಮತ್ತು ಚುನಾವಣಾ ಚಿಹ್ನೆಗಳನ್ನು ಚುನಾವಣಾ ಆಯೋಗ ಮಂಗಳವಾರ ನೀಡಿದೆ.
ಚಿರಾಗ್ ಪಾಸ್ವಾನ್ ಗುಂಪಿಗೆ ‘ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)’ ಮತ್ತು ಚುನಾವಣಾ ಚಿಹ್ನೆಯಾಗಿ ‘ಹೆಲಿಕಾಪ್ಟರ್’ ಅನ್ನು ನಿಗದಿಪಡಿಸಲಾಗಿದ್ದರೆ, ಪರಾಸ್ ಗುಂಪಿಗೆ ‘ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ’ ಹಾಗೂ ಚಿಹ್ನೆಯಾಗಿ ‘ಹೊಲಿಗೆ ಯಂತ್ರ’ವನ್ನು ನಿಗದಿಪಡಿಸಲಾಗಿದೆ.
ಎರಡೂ ಗುಂಪಿನ ನಡುವಿನ ವಿವಾದ ಬಗೆಹರಿಯುವ ತನಕ ‘ಲೋಕ ಜನಶಕ್ತಿ ಪಕ್ಷ’ ಮತ್ತು ಅದರ ಚಿಹ್ನೆಯಾದ ‘ಬಂಗಲೆ’ಯನ್ನು ಬಳಸದಂತೆ ಚುನಾವಣಾ ಆಯೋಗ ಇತ್ತೀಚೆಗೆ ಮಧ್ಯಂತರ ಆದೇಶ ಹೊರಡಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.