ಶುಕ್ರವಾರ, ಮೇ 7, 2021
26 °C

ಗೋವಾ ಪ್ರವಾಸಿ ತಾಣಗಳಲ್ಲಿ ಲಾಕ್‌ಡೌನ್‌ ಮುಂದುವರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಣಜಿ: ‘ಗೋವಾದ ಪ್ರಮುಖ ಪ್ರವಾಸಿ ತಾಣಗಳಾದ ಕಲಂಗುಟ್,ಅರ್ಪೊರಾ-ನಾಗೋವಾ ಮತ್ತು ಕ್ಯಾಂಡೋಲಿಮ್‌ ಹೊರತುಪಡಿಸಿ ರಾಜ್ಯದ ಇತರೆ ಭಾಗಗಳಲ್ಲಿ ಲಾಕ್‌ಡೌನ್‌ ತೆರವುಗೊಳಿಸಲಾಗಿದೆ’ ಎಂದು ಗೋವಾದ ಬಂದರು ಸಚಿವ ಮೈಕಲ್‌ ಲೊಬೊ ಸೋಮವಾರ ತಿಳಿಸಿದ್ದಾರೆ.

ಗೋವಾದಲ್ಲಿ ಕಳೆದ ಗುರುವಾರ ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದವು. ಹೀಗಾಗಿ, ಏಪ್ರಿಲ್‌ 29ರಿಂದ ಲಾಕ್‌ಡೌನ್‌  ಹೇರಲಾಗಿತ್ತು.

ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಲಾಕ್‌ಡೌನ್‌ ತೆರವುಗೊಳಿಸಲಾಗಿದೆ.

‘ಉತ್ತರ ಗೋವಾದ ಪ್ರವಾಸಿ ತಾಣಗಳಾದ ಕಲಂಗುಟ್, ಕ್ಯಾಂಡೋಲಿಮ್‌ ಮತ್ತು ಅರ್ಪೊರಾ-ನಾಗೋವಾದಲ್ಲಿ ಲಾಕ್‌ಡೌನ್‌ ಅನ್ನು ಮುಂದುವರಿಸಲು ಅಲ್ಲಿನ ಗ್ರಾಮ ಪಂಚಾಯಿತಿಗಳು ನಿರ್ಧಾರ ಕೈಗೊಂಡಿವೆ’ ಎಂದು ಲೊಬೊ ಮಾಹಿತಿ ನೀಡಿದರು.

‘ಈ ಪ್ರದೇಶದ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸಲಾಗುವುದು. ಈ ಬಗ್ಗೆ ಸ್ಥಳೀಯ ಆಡಳಿತವು ಗಮನವಹಿಸಲಿದೆ’ ಎಂದು ಅವರು ಹೇಳಿದರು.

‘ಈ ಪ್ರದೇಶಗಳಲ್ಲಿ ಪ್ರಸ್ತುತ 1,611 ಸಕ್ರಿಯ ಪ್ರಕರಣಗಳಿವೆ’ ಎಂದು ರಾಜ್ಯದ ಆರೋಗ್ಯ ನಿರ್ದೇಶನಾಲಯವು ತಿಳಿಸಿದೆ.

‘ಗೋವಾದಲ್ಲಿ ಸೋಮವಾರ ಬೆಳಿಗ್ಗೆ 6 ರಿಂದ ಲಾಕ್‌ಡೌನ್‌ ಅನ್ನು ತೆರವುಗೊಳಿಸಲಾಗುವುದು. ಆದರೆ, ಮೇ 10ರ ತನಕ ನಿರ್ಬಂಧಗಳು ಮುಂದುವರಿಯಲಿವೆ. ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ನಿರ್ಬಂಧಿಸಲಾಗಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು