ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಸರಳವಾಗಿ ಈದ್‌ ಆಚರಣೆ

Last Updated 13 ಮೇ 2021, 7:44 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದಲ್ಲಿ ದೊಡ್ಡ ಹಬ್ಬದ ರೀತಿಯಲ್ಲಿ ಆಚರಿಸಲಾಗುವ ಈದ್‌–ಉಲ್‌–ಫಿತ್ರ್‌ ಅನ್ನು ಈ ಬಾರಿ ಕೋವಿಡ್‌ ಕರ್ಫ್ಯೂ ಕಾರಣಕ್ಕೆ ಸರಳವಾಗಿ ಆಚರಿಸಲಾಗುತ್ತಿದ್ದು, ಗುರುವಾರ ಜನರು ಸಣ್ಣ ಗುಂಪುಗಳಲ್ಲಿ ಸೇರಿ ಸ್ಥಳೀಯ ಮಸೀದಿಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು.

ವಿಶೇಷವೆಂದರೆ ಕಾಶ್ಮೀರದಲ್ಲಿ ಸತತ ನಾಲ್ಕನೇ ಬಾರಿಗೆ ಹೀಗೆ ಸರಳ ರೀತಿಯಿಂದ ಈದ್ ಆಚರಿಸುವ ಸಂದರ್ಭ ಒದಗಿದೆ. ಕಳೆದ ವರ್ಷವೂ ಕೋವಿಡ್‌ ಪಿಡುಗಿನಿಂದಾಗಿ ಸರಳವಾಗಿಯೇ ಆಚರಿಸುವ ಅನಿವಾರ್ಯತೆ ಒದಗಿತ್ತು. ಕಳೆದ ವರ್ಷ ಈದ್–ಉಲ್‌–ಅಝಾ ವನ್ನು ಸಹ ಸಹ ಕೋವಿಡ್ ಕಾರಣಕ್ಕೆ ಸರಳವಾಗಿ ಆಚರಿಸಲಾಗಿತ್ತು.

2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಕಾರಣಕ್ಕೆ ಕಾಶ್ಮೀರ ಕಣಿವೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕರ್ಫ್ಯೂ ವಿಧಿಸಿದ್ದರು. ಹೀಗಾಗಿ ಆ ಸಲ ಈದ್‌ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT