ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕಪರಿಶೋಧನೆ: ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರ

Last Updated 30 ಮಾರ್ಚ್ 2022, 16:27 IST
ಅಕ್ಷರ ಗಾತ್ರ

ನವದೆಹಲಿ: ಲೆಕ್ಕಪರಿಶೋಧಕರು, ವೆಚ್ಚ ಪರಿಶೋಧಕರು ಹಾಗೂ ಕಂಪನಿ ಕಾರ್ಯದರ್ಶಿಗಳ ಸಂಸ್ಥೆಗಳ ಕಾರ್ಯವಿಧಾನ ಪರಿಷ್ಕರಿಸುವ ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿತು.

ಐಸಿಎಐ, ಐಸಿಡಬ್ಲ್ಯುಎಐ ಹಾಗೂ ಐಸಿಎಸ್‌ಐ ಸಂಸ್ಥೆಗಳಿಗೆ ಈ ತಿದ್ದುಪಡಿಗಳು ಅನ್ವಯವಾಗಲಿವೆ. ‘ಲೆಕ್ಕ ಪರಿಶೋಧಕರಲ್ಲದ ಹಾಗೂ ವೆಚ್ಚ ಪರಿಶೋಧಕರಲ್ಲದ ಹಾಗೂ ಕಂಪನಿ ಕಾರ್ಯದರ್ಶಿಯಲ್ಲದ ವ್ಯಕ್ತಿಯನ್ನು ಈ ಸಂಸ್ಥೆಗಳ ಶಿಸ್ತು ಸಮಿತಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಈ ತಿದ್ದುಪಡಿ ಮಸೂದೆ ಅವಕಾಶ ಕಲ್ಪಿಸುತ್ತದೆ.

ಮಸೂದೆ ಮಂಡಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಪ್ರಸ್ತುತ ಕಾಯ್ದೆಯಲ್ಲಿ ಮಾಡಲಾಗುವ ಬದಲಾವಣೆಗಳಿಂದ ಈ ಮೂರು ಸಂಸ್ಥೆಗಳ ಸ್ವಾಯತ್ತತೆಗೆ ಯಾವುದೇ ಧಕ್ಕೆಯಾಗುವುದಿಲ್ಲ‘ ಎಂದರು.

‘ತಿದ್ದುಪಡಿಗಳಿಂದಾಗಿ ಈ ಸಂಸ್ಥೆಗಳ ಜವಾಬ್ದಾರಿ ಹಾಗೂ ಉತ್ತರದಾಯಿತ್ವ ಹೆಚ್ಚಲಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT