ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದ ಯೂಸುಫ್‌ ಆಲಿ

Last Updated 16 ಏಪ್ರಿಲ್ 2021, 8:35 IST
ಅಕ್ಷರ ಗಾತ್ರ

ಕೊಚ್ಚಿ: ಅನಿವಾಸಿ ಭಾರತೀಯ ಉದ್ಯಮಿ ಮತ್ತುಲೂಲು ಗ್ರೂಪ್‌ನ ಅಧ್ಯಕ್ಷ ಎಂ.ಎ ಯೂಸುಫ್‌ ಆಲಿ ಅವರು ಮಂಗಳವಾರ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಏಪ್ರಿಲ್‌ 11 ರಂದು ಭಾರೀ ಮಳೆಯಿಂದಾಗಿ ಕೊಚ್ಚಿಯ ಜೌಗು ಪ್ರದೇಶದಲ್ಲಿ ಹೆಲಿಕಾಪ್ಟರ್‌ ಪತನಗೊಂಡಿತ್ತು. ಈ ಅಪಘಾತದಲ್ಲಿ ಯೂಸುಫ್‌, ಅವರ ಪತ್ನಿ, ಇಬ್ಬರು ಪ್ರಯಾಣಿಕರು ಮತ್ತು ಪೈಲಟ್‌ಗಳು ಗಾಯಗೊಂಡಿದ್ದರು.

‘ಅಬುಧಾಬಿಯ ರಾಜಮನೆತನ ಕಳುಹಿಸಿದ್ದ ವಿಶೇಷ ವಿಮಾನದಲ್ಲಿ ಯೂಸೂಫ್‌ ಅವರು ಸೋಮವಾರ ಅಬುಧಾಬಿಗೆ ಹಿಂತಿರುಗಿದರು. ಅಲ್ಲಿನ ಬುರ್ಜೀಲ್ ಆಸ್ಪತ್ರೆಯಲ್ಲಿಯೂಸುಫ್‌ ಅವರು ಮಂಗಳವಾರ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದರು’ ಎಂದು ಲೂಲು ಗ್ರೂಪ್‌ ತಿಳಿಸಿದೆ.

‘ಜರ್ಮನಿಯ ಖ್ಯಾತ ನ್ಯೂರೊಸರ್ಜನ್‌ ಡಾ.ಶಾವರ್ಬಿ ನೇತೃತ್ವದ 25 ವೈದ್ಯರ ತಂಡವು ಶಸ್ತ್ರಚಿಕಿತ್ಸೆ ನಡೆಸಿದೆ. ಸದ್ಯ ಯೂಸುಫ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಲೂಲು‌ ಗ್ರೂಫ್‌ ಗುರುವಾರ ರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT