ಮಂಗಳವಾರ, ಅಕ್ಟೋಬರ್ 27, 2020
18 °C

ತಕ್ಷಣದ ಅಗತ್ಯಗಳಿಗೆ ಮೇಕ್ ಇನ್ ಇಂಡಿಯಾ 'ಕಾರ್ಬೈನ್' ಪರಿಗಣಿಸಲಿದೆ ಭದ್ರತಾ ಪಡೆಗಳು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಎಂ–4 ಕಾರ್ಬೈನ್–ಸಂಗ್ರಹ ಚಿತ್ರ

ನವದೆಹಲಿ: ಚೀನಾ ಗಡಿ ಪ್ರದೇಶದಲ್ಲಿ ಬಿಕ್ಕಟ್ಟು ಎದುರಾಗಿರುವ ಈ ಸಮಯದಲ್ಲಿ ತಕ್ಷಣದ ಅಗತ್ಯಗಳಿಗಾಗಿ ಭಾರತೀಯ ಭದ್ರತಾ ಪಡೆಗಳು 'ಮೇಡ್ ಇನ್ ಇಂಡಿಯಾ' ಕಾರ್ಬೈನ್‌ಗಳನ್ನು ಪಡೆದುಕೊಳ್ಳಲು ನಿರ್ಧರಿಸಿವೆ.

ಯುದ್ಧ ಸಮಯದಲ್ಲಿ ಸಮೀಪದ ಹೋರಾಟಗಳಲ್ಲಿ ರೈಫಲ್ ರೀತಿಯ ಕಾರ್ಬೈನ್ ಬಳಸಲಾಗುತ್ತದೆ. ರೈಫಲ್‌ನ ಚಿಕ್ಕ ಮಾದರಿಯಂತೆ ಕಾಣುವ ಕಾರ್ಬೈನ್‌ಗಳಿಗಾಗಿ ಭಾರತೀಯ ಸೇನೆ ಹಲವು ವರ್ಷಗಳಿಂದ ಎದುರು ನೋಡುತ್ತಿದೆ.

ಭದ್ರತಾ ಪಡೆಗಳಿಗೆ ಒಟ್ಟಾರೆ 3.5 ಲಕ್ಷ ಕಾರ್ಬೈನ್‌ಗಳ ಅವಶ್ಯಕತೆ ಇದ್ದು, ಚುರುಕು ರಫ್ತು ಪ್ರಕ್ರಿಯೆಗಳ ಮೂಲಕ 94,000 ಶಸ್ತ್ರಗಳನ್ನು ಪಡೆದುಕೊಳ್ಳಲು ಯೋಜಿಸಲಾಗಿದೆ. ಆದರೆ, ರಫ್ತು ಪ್ರಕ್ರಿಯೆ ಫಲಪ್ರದವಾಗುವ ಸಾಧ್ಯತೆಗಳು ಕಡಿಮೆ ಇರುವುದರಿಂದ ದೇಶೀಯ ನಿರ್ಮಿತ ಕಾರ್ಬೈನ್ ಕಡೆಗೆ ಗಮನ ಹರಿಸಲಾಗಿದೆ.

ದೇಶದ ಆಯುಧ ನಿರ್ಮಾಣ ಮಂಡಳಿಯು (ಒಎಫ್‌ಬಿ) ಪಶ್ಚಿಮ ಬಂಗಾಳದ ಈಶಾಪುರದ ರೈಫಲ್‌ ಫ್ಯಾಕ್ಟರಿಯಲ್ಲಿ ಸಿದ್ಧಪಡಿಸಲಾಗಿರುವ ಕಾರ್ಬೈನ್‌ಗಳನ್ನು ಶಸ್ತ್ರಾಸ್ತ್ರ ಪಡೆಗಳಿಗೆ ನೀಡಲಾಗಿದ್ದು, ಅವುಗಳ ಪರೀಕ್ಷೆ ನಡೆಸಲಾಗುತ್ತಿದೆ.

ದೇಶೀಯ ಕಾರ್ಬೈನ್‌ ಪಡೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಬಳಕೆ ಖಚಿತ ಪಟ್ಟರೆ ಅದನ್ನು ಬಹಳಷ್ಟು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಆರಂಭದಲ್ಲಿ ಭದ್ರತಾ ಪಡೆಗಳಲ್ಲಿ ಸೀಮಿತ ಸಂಖ್ಯೆಯ ಕಾರ್ಬೈನ್‌ ಬಳಕೆಗೆ ತರಲಾಗುತ್ತದೆ.

2008ರಿಂದಲೂ ಶಸ್ತ್ರಾಸ್ತ್ರ ಪಡೆಗಳಿಗೆ ಸಿಕ್ಯುಬಿ ಕಾರ್ಬೈನ್‌ಗಳನ್ನು ಪಡೆದುಕೊಳ್ಳುವ ಪ್ರಯತ್ನ ಸಫಲವಾಗಿಲ್ಲ.

ಸಿಗ್‌ (SIG) ಸಾವುರ್‌ ರೈಫಲ್‌ಗಳ‌ ಎರಡನೇ ಬ್ಯಾಚ್ ಬಳಕೆಗೆ ಪಡೆಯಲು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಮತಿಸಿದೆ. ಪೂರ್ವ ಲಡಾಕ್‌ನಲ್ಲಿ ಚೀನಾ ಪಡೆಗಳ ಎದುರು ನಿಯೋಜಿಸಲಾಗಿರುವ ಭಾರತದ ಪಡೆಗಳಿಗೆ ಈ ರೈಫಲ್‌ಗಳನ್ನು ಪೂರೈಸಲಾಗುತ್ತಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು