ಶನಿವಾರ, ಮಾರ್ಚ್ 25, 2023
25 °C

ಮಧ್ಯಪ್ರದೇಶ: ಕೋವಿಡ್ ಪರೀಕ್ಷೆಗೊಳಪಡದ ವ್ಯಕ್ತಿಗಳಿಗೂ ಪಾಸಿಟಿವ್ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

MadhyaPradesh

ದಿಹಾರ್: ಕೋವಿಡ್ ಪರೀಕ್ಷೆಗೊಳಪಡದೇ ಇರುವ ವ್ಯಕ್ತಿಗಳಿಗೂ ಕೋವಿಡ್-19 ರೋಗ ದೃಢಪಟ್ಟಿರುವ ವೈದ್ಯಕೀಯ ವರದಿ ನೀಡಿದ ಪ್ರಕರಣದಲ್ಲಿ ಇಬ್ಬರು ವೈದ್ಯಕೀಯ ಸಿಬ್ಬಂದಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಿಸಾರ್‌ಪುರ್ ಬ್ಲಾಕ್‌ನ ಥಾನಾ ಗ್ರಾಮದಲ್ಲಿ ಈ  ಪ್ರಕರಣ ನಡೆದಿದೆ. 

ತಮ್ಮ ನಿರ್ಲಕ್ಷ್ಯದಿಂದಾಗಿ ಗ್ರಾಮದ ಜನರಲ್ಲಿ ಭೀತಿ ಹುಟ್ಟಿಸಿದ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಲೋಕ್ ಕುಮಾರ್ ಸಿಂಗ್ ಹೇಳಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ ಬ್ಲಾಕ್ ಕಮ್ಯೂನಿಟಿ ಮೊಬಿಲೈಸರ್ (ಬಿಸಿಎಂ) ಮತ್ತು ಟೆಕ್ನಿಷಿಯನ್‌ನ ನಿರ್ಲಕ್ಷ್ಯದಿಂದ ಇದು ಸಂಭವಿಸಿದೆ. ಇತರ ವ್ಯಕ್ತಿಗಳಿಂದ ಸಂಗ್ರಹಿಸಿದ ಮಾದರಿಗಳು ಪರೀಕ್ಷಾ ಕಿಟ್‌ನಲ್ಲಿ ಅಸ್ತವ್ಯಸ್ಥಗೊಂಡು ಈವರೆಗೆ ಮಾದರಿಗಳನ್ನು ನೀಡದೇ ಇರುವ ವ್ಯಕ್ತಿಗಳಿಗೆ ಪರೀಕ್ಷಾ ವರದಿ ಕಳುಹಿಸಿಕೊಟ್ಟಿರುವ ಸಾಧ್ಯತೆ ಇದೆ ಎಂದು ಸಿಂಗ್ ಹೇಳಿದ್ದಾರೆ.

ತಕ್ಷಣವೇ ಬಿಸಿಎಂ ಬಚ್ಚನ್ ಮುಜಲ್ದಾ ಮತ್ತು ಟೆಕ್ನಿಷಿಯನ್ ಗುಮಾನ್ ಸಿಂಗ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕೊರೊನಾವೈರಸ್ ದೃಢಪಟ್ಟಿರುವುದಾಗಿ ಗ್ರಾಮದ 12 ಮಂದಿಗೆ ತಿಳಿಸಲಾಗಿತ್ತು. ಥಾನಾ ಗ್ರಾಮದಲ್ಲಿ ಮಾದರಿ ಸಂಗ್ರಹಿಸುತ್ತಿದ್ದ ವೇಳೆ ತಾನು ಭೋಪಾಲ್‌ನಲ್ಲಿದ್ದೆ. ಒಟ್ಟು 4 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆರೋಗ್ಯ ಇಲಾಖೆಯ ತಂಡ ಬಂದು ಮಾದರಿ ಸಂಗ್ರಹಿಸದೇ 15 ಮಂದಿ ಗ್ರಾಮಸ್ಥರ ಮಾಹಿತಿ ಪಡೆದುಕೊಂಡಿತ್ತು. ಹೆಚ್ಚಿನವರು ಆ ಹೊತ್ತಲ್ಲಿ ಗ್ರಾಮದಲ್ಲಿರಲಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಈವರೆಗೆ 93,053  ಸೋಂಕು ಪ್ರಕರಣಗಳು ವರದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು