ಬುಧವಾರ, ಮಾರ್ಚ್ 29, 2023
23 °C

ಉದ್ಧವ್ ಠಾಕ್ರೆ ಬಣದ ನಾಲ್ವರು ಶಾಸಕರು ಸಂಪರ್ಕದಲ್ಲಿ: ನಾರಾಯಣ ರಾಣೆ

ಪಿಟಿಐ Updated:

ಅಕ್ಷರ ಗಾತ್ರ : | |

‍ಪುಣೆ: ಶಿವಸೇನಾದ ಉದ್ದವ್‌ ಠಾಕ್ರೆ ಬಣದ ನಾಲ್ವರು ಶಾಸಕರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣ ಸೇರಲು ತಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಹೇಳಿದರು. ಆದರೆ, ಶಾಸಕರ ಹೆಸರುಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. 

ರೋಜಗಾರ್‌ ಮೇಳದಲ್ಲಿ ಭಾಗವಹಿಸಲು ನಗರಕ್ಕೆ ಭೇಟಿ ನೀಡಿರುವ ಅವರು, 56 ಶಾಸಕರ ಪೈಕಿ ಠಾಕ್ರೆ ಬಣದಲ್ಲಿ ಏಳು ಶಾಸಕರು ಇದ್ದಾರೆ. ಅವರು ಸಹ ಹೊರ ಬರಲು ನಿರ್ಧರಿಸಿದ್ದಾರೆ. ನಾಲ್ವರು ತಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ರಾಣೆ ಹೇಳಿದರು. 

ಠಾಕ್ರೆ ಅವರನ್ನು ಲೇವಡಿ ಮಾಡಿದ ರಾಣೆ, ’ಅವರ ರಾಜಕೀಯ ಮಾತೋಶ್ರೀಗೆ (ಮುಂಬೈನ ಬಾಂದ್ರಾದಲ್ಲಿರುವ ಠಾಕ್ರೆ ಖಾಸಗಿ ನಿವಾಸ) ಸೀಮಿತವಾಗಿದೆ. ಸೇನೆಯಲ್ಲಿ ಯಾವುದೇ ಬಣ ಉಳಿದಿಲ್ಲ ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು