ಸೋಮವಾರ, ಜೂನ್ 21, 2021
29 °C

ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಕೋವಿಡ್ ಲಸಿಕೆಗಳನ್ನು ಹಿಂಪಡೆದು, ಅವುಗಳನ್ನು ಸಾರ್ವಜನಿಕರಿಗೆ ಆರೋಗ್ಯ ಕೇಂದ್ರಗಳ ಮೂಲಕ ನೀಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದೆ.

ರಾಜ್ಯದ ಆರೋಗ್ಯ ಸಚಿವ ರಾಜೇಶ್ ತೋಪೆ ಅವರು, ಕೇಂದ್ರ ಸರ್ಕಾರದ ಆದೇಶದಂತೆಯೇ ಈ ಕ್ರಮವನ್ನು ಜರುಗಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ವಿತರಿಸಲಾದ ಎಲ್ಲ ಲಸಿಕೆಗಳನ್ನು ಹಿಂಪಡೆಯಲಾಗುವುದು ಎಂದರು.

ಮೇ 1 ರಿಂದ 18 ರಿಂದ 44 ವರ್ಷದವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಕುರಿತ ಪ್ರಶ್ನೆಗೆ, ‘ನಿತ್ಯದ ಆಧಾರದಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತೆ ಲಸಿಕೆ ಕೇಂದ್ರಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು‘ ಎಂದು ತಿಳಿಸಿದರು.

ಮೇ ತಿಂಗಳಲ್ಲಿ ರಾಜ್ಯಕ್ಕೆ 18 ಲಕ್ಷ ವೈಲ್ಸ್‌ಗಳ ಅಗತ್ಯವಿದೆ ಎಂದು ಲಸಿಕೆ ಉತ್ಪಾದಕರಿಗೆ ತಿಳಿಸಿದ್ದೇವೆ. ಅಷ್ಟು ಲಭ್ಯವಾದರೆ ಲಸಿಕೆ ವಿತರಣೆಗೆ ಜಿಲ್ಲೆಗೊಂದರಂತೆ ಕೇಂದ್ರ ತೆರೆಯಲಾಗುವುದು. ಜನರು ಪೂರ್ವನಿಗದಿತ ಸಮಯಕ್ಕೆ ನಿಗದಿತ ಕೇಂದ್ರಕ್ಕೆ ಬರಬೇಕು. ಇದು, ಒಟ್ಟು ಒತ್ತಡವನ್ನು ತಗ್ಗಿಸಲಿದೆ. ರಾಜ್ಯಕ್ಕೆ ಅಗತ್ಯವಿರುವಷ್ಟು ಲಸಿಕೆಯು ಲಭ್ಯವಾಗದೇ ಕೇಂದ್ರಗಳ ಸಂಖ್ಯೆಯನ್ನು ನಾವು ಹೆಚ್ಚಿಸಲಾಗದು ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು