ದೆಹಲಿ: ವಿಪರೀತ ಚಳ; ತಾಪಮಾನ ಕನಿಷ್ಠ 6.3 ಡಿಗ್ರಿ ಸೆಲ್ಸಿಯಸ್

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಚಳಿಯ ಪ್ರಮಾಣ ಹೆಚ್ಚುತ್ತಿದ್ದು, ಕನಿಷ್ಠ ತಾಪಮಾನ ಸೋಮವಾರ 6.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು, ಕಳೆದ 17 ವರ್ಷಗಳಲ್ಲಿ ನವೆಂಬರ್ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ.
ಇದು, ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತಲೂ 5 ಅಂಶಗಳಷ್ಟು ಕಡಿಮೆ ಆಗಿದೆ. ಕನಿಷ್ಠ ತಾಪಮಾನ ಕಳೆದ ಬಾರಿ 2003ರ ನವೆಂಬರ್ ತಿಂಗಳಲ್ಲಿ ದಾಖಲಾಗಿತ್ತು ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಭಾನುವಾರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ ಪ್ರಮಾಣ 6.9 ಡಿಗ್ರಿ ಸೆಲ್ಸಿಯಸ್ ಇದ್ದರೆ, ಗರಿಷ್ಠ ತಾಪಮಾನ 24.2 ಡಿಗ್ರಿ ಸೆಲ್ಸಿಯಸ್ ಇತ್ತು. ಇದು, ಈ ತಿಂಗಳು ಹಗಲಿನ ಹೊತ್ತು ದಾಖಲಾದ ಕನಿಷ್ಠ ಪ್ರಮಾಣವಾಗಿದೆ.
ಹವಾಮಾನ ಸ್ಥಿತಿ ಕುರಿತು ಮಾಹಿತಿ ನೀಡುವ ಸಫ್ದರರ್ಜಂಗ್ ಕೇಂದ್ರ ಮುಖ್ಯಸ್ಥ ಕುಲದೀಪ್ ಶ್ರೀವಾತ್ಸವ ಅವರ ಪ್ರಕಾರ, ನವೆಂಬರ್ 2003ರಲ್ಲಿ ಕನಿಷ್ಠ ತಾಪಮಾನ 6.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದೇ ಈವರೆಗಿನ ಕನಿಷ್ಠ ದಾಖಲೆಯಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.