ನಾಗ್ಪುರ: ‘ಉಗ್ರ ಸಂಘಟನೆ ಎನ್ನಲಾದ ‘ಗಾಜವಾ ಏ ಹಿಂದ್’ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಇಲ್ಲಿನ ಸತರಂಜಿಪುರ ಹಾಗೂ ಗವಾಲಿಪುರಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಗುರುವಾರ ಬೆಳಿಗ್ಗೆ 5ರ ಸುಮಾರಿಗೆ ಶೋಧಕಾರ್ಯ ನಡೆಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಶೋಧಕಾರ್ಯ ನಡೆಸುವ ವೇಳೆ ಮೂವರನ್ನು ಪ್ರಶ್ನಿಸಲಾಗಿದೆ. ಜೊತೆಗೆ ತನಿಖೆಗೆ ಹಾಜರಾಗುವಂತೆ ಎನ್‌ಐಎ ಈ ಮೂವರಿಗೂ ನೋಟಿಸ್ ನೀಡಿದೆ. ಈ ಮೂವರಲ್ಲಿ ಸತರಂಜಿಪುರದ ಒಬ್ಬರ ಮೊಬೈಲ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಹಿಂಸೆ ಮಾರ್ಗದ ಮೂಲಕ ಭಾರತವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವನ್ನಾಗಿ ರೂಪಿಸಲು ‘ಗಾಜವಾ ಏ ಹಿಂದ್’ ಉಗ್ರ ಸಂಘಟನೆ ಬಯಸಿದೆ. ಇದಕ್ಕಾಗಿ ಭಾರತದ ಯುವಕರನ್ನು ಬಳಸಿಕೊಳ್ಳಲು ಇಚ್ಛಿಸಿದೆ. ಇದನ್ನು ಸಾಧ್ಯವಾಗಿಸಿಕೊಳ್ಳಲು ಈ ಸಂಘಟನೆಯು ವಾಟ್ಸ್‌ಆ್ಯಪ್ ಗ್ರೂಪ್‌ವೊಂದನ್ನು ರಚಿಸಿದೆ’ ಎಂದು ಎನ್‌ಐಎ ಆರೋಪಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.